ನೆತ್ತಿ ಸುಡುತ್ತಿರುವ ಬಿಸಲು: ವಿದ್ಯುತ್ ಅವಶ್ಯವಿಲ್ಲದ ಬಡವರ ಫ್ರಿಜ್ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ಯಾದಗಿರಿ ಜಿಲ್ಲೆಯಲ್ಲಿ ಅತಿಯಾದ ಬಿಸಿಲಿನಿಂದಾಗಿ ಜನರು ತಂಪಾದ ನೀರಿಗಾಗಿ ಮಣ್ಣಿನ ಮಡಿಕೆಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಫ್ರಿಜ್‌ಗಳಿಗಿಂತ ಮಣ್ಣಿನ ಮಡಕೆಗಳಲ್ಲಿ ನೀರು ತಂಪಾಗಿರುತ್ತದೆ ಎಂಬ ನಂಬಿಕೆಯಿಂದ ಈ ಬೇಡಿಕೆ ಹೆಚ್ಚಾಗಿದೆ. ಕುಂಬಾರರು ಹೆಚ್ಚಿನ ಪ್ರಮಾಣದಲ್ಲಿ ಮಡಿಕೆಗಳನ್ನು ತಯಾರಿಸುತ್ತಿದ್ದು, ರಾಜಸ್ಥಾನ, ಗುಜರಾತ್ ಮುಂತಾದೆಡೆಯಿಂದಲೂ ಬಣ್ಣಬಣ್ಣದ ಮಡಕೆಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಬೇಡಿಕೆ ಹೆಚ್ಚಳದಿಂದ ಮಡಿಕೆ ವ್ಯಾಪಾರ ಜೋರಾಗಿದೆ.
Updated on:Mar 31, 2025 | 7:42 PM

ಬೇಸಿಗೆ ಆರಂಭದಲ್ಲೇ ರಣ ಬಿಸಿಲು ಜನರನ್ನು ಹೈರಾಣಾಗಿಸಿದೆ. ನೆತ್ತಿ ಮೇಲೆ ಸುಡುವ ಬಿಸಿಲಿಗೆ ಜನ ಬೆಂದು ಬೆಂಡಾಗುತ್ತಿದ್ದಾರೆ. ಇದೆ ಕಾರಣಕ್ಕೆ ಜನ ಮಣ್ಣಿನ ಮಡಕೆ ನೀರಿನ ಮೊರೆ ಹೋಗುತ್ತಿದ್ದಾರೆ. ಜನರು ಮಡಿಕೆ ಖರೀದಿ ಮಾಡುತ್ತಿದ್ದಾರೆ. ಫ್ರೀಡ್ಜ್ ಗಿಂತ ನ್ಯಾಚುರಲ್ ಆಗಿ ನೀರನ್ನು ತಂಪಾಗಿಸುವ ಮಡಿಕೆಯನ್ನು ಖರೀದಿಸುತ್ತಿದ್ದಾರೆ.

ಯಾದಗಿರಿ ಜಿಲ್ಲೆ ಬಿಸಲು ನಾಡು ಎಂದೆ ಪ್ರಖ್ಯಾತಿ ಪಡೆದಿದೆ. ಈ ಬಾರಿ ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗಿದೆ ಕೆರೆ ಕಟ್ಟೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಆದರೂ, ಸಹ ಬೇಸಿಗೆಯ ಆರಂಭದ ದಿನಗಳಲ್ಲೇ ಜಿಲ್ಲೆಯಲ್ಲಿ ಸುಮಾರು 39 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಇದೆ ಕಾರಣಕ್ಕೆ ಜನ ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಅದರಲ್ಲೂ ಮಧ್ಯಾಹ್ನದ ವೇಳೆಯಲ್ಲಿ ರಸ್ತೆ ಮೇಲೆ ಓಡಾಡೋದು ಸಹ ಕಷ್ಟ ಆಗುತ್ತಿದೆ.

ಆದರೂ, ಅನಿವಾರ್ಯ ಕಾರಣದಿಂದ ಮನೆಯಿಂದ ಹೊರ ಬರಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರ ಬಂದ ಜನ ವಾಪಸ್ ಮನೆಗೆ ಹೋದ ಕೂಡ್ಲೆ ತಣ್ಣನೇ ನೀರು ಕುಡಿಯಬೇಕು ಅಂತ ಅಂದುಕೊಳ್ಳುತ್ತಾರೆ. ತಣ್ಣನೇ ನೀರು ಕುಡಿಯೋಕೆ ಜನ ಫ್ರೀಡ್ಜ್ ಬದಲಿಗೆ ಮಣ್ಣಿನ ಮಡಕೆಯನ್ನು ಬಳಸುತ್ತಿದ್ದಾರೆ. ಇದೆ ಕಾರಣಕ್ಕೆ ಜನ ಮಣ್ಣಿನ ಮಡಕೆಗಳನ್ನು ಖರೀದಿ ಮಾಡುತ್ತಿದ್ದಾರೆ.

ಯಾದಗಿರಿ ನಗರದ ವಿವಿಧ ಕಡೆ ಕುಂಬಾರು ಮಣ್ಣಿನ ಮಡಕೆ ಮಾರಾಟ ಶುರು ಮಾಡಿದ್ದಾರೆ. ಅದರಲ್ಲೂ ನಗರದ ಹಳೆ ಜಿಲ್ಲಾಸ್ಪತ್ರೆ ರಸ್ತೆ, ಗಾಂಧಿ ಸರ್ಕಲ್ ಹಾಗೂ ಹತ್ತಿಕುಣಿ ಸರ್ಕಲ್ ಸೇರಿದಂತೆ ವಿವಿಧಡೆ ಮಡಿಕೆ ಮಾರಾಟ ಜೋರಾಗಿದೆ. ಕೆರೆ ಮಣ್ಣನನ್ನು ತಂದು ಹದ ಮಾಡಿ ಕುಂಬಾರರು ಮಡಿಕೆಗಳನ್ನ ತಯಾರು ಮಾಡುತ್ತಿದ್ದಾರೆ. ಜನರ ಬೇಡಿಕೆ ಜಾಸ್ತಿಯಾಗಿದ್ದರಿಂದ ಕುಂಬಾರರು ಬೇರೆ ಕಡೆಯಿಂದ ಮಡಿಕೆಗಳನ್ನು ತರಿಸಿಕೊಳ್ಳುತ್ತಿದ್ದಾರೆ.

ಇನ್ನು, ಈ ಬಾರಿ ಕಲರ್ ಫುಲ್ ಮಡಕೆಗಳನ್ನು ಕುಂಬಾರು ತರಿಸಿಕೊಂಡಿದ್ದರಿಂದ ಜನರಿಂದ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಅದರಲ್ಲೂ ಗ್ರಾಹರನ್ನು ಸೆಳೆಯುವಂತ ಮಡಿಕೆಗಳನ್ನ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದಿಂದ ಮಡಕೆಗಳನ್ನ ತರಸಿಕೊಂಡಿದ್ದಾರೆ. ಪಿಓಪಿಯಿಂದ ತಯಾರಾಗುವ ಮಡಿಕೆಗಳನ್ನ ತರಿಸಿಕೊಳ್ಳದೆ ಕೇವಲ ಮಣ್ಣಿನಿಂದ ತಯಾರಾಗುವ ಮಡಿಕೆಗಳನ್ನೇ ತರಸಿಕೊಂಡಿದ್ದಾರೆ.

ಬಣ್ಣ ಬಣ್ಣದ ಮಡಕೆಗಳನ್ನ ನೋಡಿದ ಜನ ಖರೀದಿ ಮುಂದಾಗುತ್ತಿದ್ದಾರೆ. ಬೇಸಿಗೆ ಮುಗಿಯುವವರೆಗೂ ಮಡಿಕೆ ನೀರು ಕುಡಿಯಬೇಕು ಎನ್ನುವ ಕಾರಣಕ್ಕೆ ಮಡಿಕೆಗಳನ್ನ ಖರೀದಿ ಮಾಡುತ್ತಿದ್ದಾರೆ. ಇನ್ನು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದ್ದ ಕಾರಣಕ್ಕೆ ಮಡಿಕೆ ವ್ಯಾಪಾರ ಜೋರಾಗಿದೆ ಅಂತಾರ ಕುಂಬಾರರು.

ಒಟ್ನಲ್ಲಿ ಬಿಸಿಲು ನಾಡು ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಮತ್ತೆ ದಾಖಲೆ ಪ್ರಮಾಣದ ಬಿಸಲು ದಾಖಲಾಗುತ್ತಿದೆ. ಇದೇ, ಮಡಿಕೆಯಲ್ಲಿನ ತಂಪಾದ ನೀರನ್ನು ಕುಡಿಯಬೇಕೆಂಬ ಆಸೆಯಿಂದ ಜನ ಮಣ್ಣಿನ ಮಡಿಕೆ ಖರೀದಿಗೆ ಮುಂದಾಗುತ್ತಿದ್ದಾರೆ.
Published On - 6:47 pm, Mon, 31 March 25



















