ಈ ಉಪಾಯಗಳೊಂದಿಗೆ ನಿಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿ
ಮನೆಯ ಅಂದ ಚಂದ ಅಳೆಯುವುದು ನಾವು ಆವರಣದಲ್ಲಿ ಅಳವಡಿಸಿದ ಅಲಂಕಾರಿಕ ವಸ್ತುಗಳಿಂದ. ಗ್ರೀನರಿ, ಕಾರಂಜಿ, ಹೂವಿನ ಗಿಡಗಳು, ಪೀಠೋಪಕರಣ ಇತ್ಯಾದಿಗಳಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.
Updated on: Jun 14, 2022 | 1:17 PM

Increase the beauty of your home with these ideas

Increase the beauty of your home with these ideas

ಅಂಗಳದಲ್ಲಿ ಹೊರಾಂಗಣ ದೀಪಗಳನ್ನು ಅಳವಡಿಸುವುದರಿಂದ ರಾತ್ರಿ ವೇಳೆ ಮನೆಯನ್ನು ಕಂಗೊಳಿಸುವಂತೆ ಮಾಡುತ್ತದೆ. ಇದು ಸುರಕ್ಷತೆ ದೃಷ್ಟಿಯಲ್ಲೂ ಒಳ್ಳೆಯದು. ಅಂಗಳದಲ್ಲಿ ವಾಸ್ತುಶಿಲ್ಪ ಅಳವಡಿಸಿ ಅಲ್ಲಿಗೊಂದು ಬಣ್ಣದ ದೀಪವನ್ನು ಇರಿಸಿ. ಇದನ್ನು ಬಾಗಿಲಿನ ಮುಂಭಾಗದಲ್ಲೂ ಇರಿಸಬಹುದು. ಲ್ಯಾಂಟರ್ನ್ಗಳು ಮತ್ತು ಪೆಂಡೆಂಟ್ ದೀಪಗಳು ಪ್ರವೇಶ ದ್ವಾರಗಳಿಗೆ ಸೂಕ್ತವಾಗಿದೆ.

ಹೊರಾಂಗಣವನ್ನು ಮನರಂಜನಾ ಪ್ರದೇಶವನ್ನಾಗಿ ಮಾಡಬೇಕೆಂದಿದ್ದರೆ ಕಾರಂಜಿಗಳನ್ನು ವಿನ್ಯಾಸಗೊಳಿಸಬಹುದು. ಇವುಗಳು ವಿವಿಧ ರೀತಿಯಲ್ಲಿ, ಬೇರೆಬೇರೆ ಶೈಲಿಗಳಲ್ಲಿ, ನಾನಾ ಗಾತ್ರಗಳಲ್ಲಿ ಲಭ್ಯವಿರುತ್ತವೆ. ರಾತ್ರಿ ವೇಳೆ ಕಂಗೊಳಿಸುವಂತೆ ಮಾಡಲು ಕಲರ್ ಲೈಟ್ ಅಳವಿಡಿಸಬಹುದು.

ಮನೆಯ ಸುತ್ತ ತಾಜಾ ಹಣ್ಣಿನ ಗಿಡ, ಅಪರೂಪದ ಹೂವಿನ ಗಿಡಗಳನ್ನು ಬೆಳೆಸಬೇಕು. ಅದಾಗ್ಯೂ ಹ್ಯಾಂಗಿಂಗ್ ಗಾರ್ಡನ್ ನಿರ್ಮಾಣ ಮಾಡಬಹುದು. ಮನೆಯ ಸಿಟ್ಔಟ್ನಲ್ಲಿ, ಕಾಂಪೌಂಡ್ನಲ್ಲಿ ಹ್ಯಾಂಗಿಂಗ್ ಗಾರ್ಡನ್ ನಿರ್ಮಿಸಿದರೆ ಮನೆಗೆ ಇನ್ನಷ್ಟು ಮೆರುಗು ತುಂಬಿಂದಂತಾಗುತ್ತದೆ.




