
ಅಲೋವೆರಾದಲ್ಲಿ ಎರಡು ವಿಧಗಳಿವೆ. ಒಂದು ಹಸಿರು ಅಲೋವೆರಾ ಆದರೆ, ಮತ್ತೊಂದು ಕೆಂಪು ಅಲೋವೆರಾ. ನಾವುಗಳು ಹೆಚ್ಚಾಗಿ ಹಸಿರು ಅಲೋವೆರಾವನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಕೆಂಪು ಅಲೋವೆರಾ ಕೂಡ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ.

ಕೆಂಪು ಅಲೋವೆರಾ ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ತಲೆನೋವು ಮತ್ತು ಮೈಗ್ರೇನ್‌ಗೆ ಚಿಕಿತ್ಸೆ ನೀಡಲು ಬಳಸಬಹುದಾಗಿದೆ.

ಕೆಂಪು ಅಲೋವೆರಾ ಚಯಾಪಚಯ ಪ್ರಕ್ರಿಯೆಯನ್ನು ಸರಾಗಗೊಳಿಸುವುದಲ್ಲದೇ, ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕೆಂಪು ಅಲೋವೆರಾ ವಯಸ್ಸಾಗುವಿಕೆಯನ್ನು ತಡೆಯುವ ಕೆಲಸ ಮಾಡುತ್ತದೆ. ಇದು ಚರ್ಮದ ಸುಕ್ಕು ಮತ್ತು ಇತರೆ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಕೆಂಪು ಅಲೋವೆರಾ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ತಲೆಹೊಟ್ಟು ಅಥವಾ ತುರಿಕೆ ಇದ್ದರೆ, ಕೆಂಪು ಅಲೋವೆರಾವನ್ನು ಬಳಸಬಹುದು.