- Kannada News Photo gallery Indian discus thrower Kamalpreet Kaur BANNED for three years for doping violation
ನಿಷೇಧಿತ ಡ್ರಗ್ ಸೇವನೆ ಆರೋಪ; ಭಾರತದ ಒಲಿಂಪಿಕ್ಸ್ ಆಟಗಾರ್ತಿಗೆ 3 ವರ್ಷ ನಿಷೇಧದ ಶಿಕ್ಷೆ..!
Kamalpreet Kaur: 27 ಸೆಪ್ಟೆಂಬರ್ 2022 ರಂದು ಕಮಲ್‌ಪ್ರೀತ್ ತನ್ನ ಮೇಲಿನ ಡೋಪಿಂಗ್ ವಿರೋಧಿ ನಿಯಮದ ಉಲ್ಲಂಘನೆಯ ಆರೋಪವನ್ನು ಒಪ್ಪಿಕೊಂಡಿರುವುದರಿಂದ ಶಿಕ್ಷೆಯಲ್ಲಿ ಒಂದು ವರ್ಷ ವಿನಾಯಿತಿ ನೀಡಿ, 3 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.
Updated on:Oct 13, 2022 | 10:39 AM

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತನ್ನ ಆಟದಿಂದ ಎಲ್ಲರ ಮನ ಗೆದ್ದಿದ್ದ ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್ ವೃತ್ತಿಜೀವನಕ್ಕೆ ಭಾರಿ ಹಿನ್ನಡೆಯಾಗಿದೆ. ಅವರನ್ನು 3 ವರ್ಷಗಳ ಕಾಲ ಈ ಆಟದಿಂದ ನಿಷೇಧಿಸಲಾಗಿದೆ.

ಕಮಲ್‌ಪ್ರೀತ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗದಿದ್ದರೂ, 63.70 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದರು. ಇದು ಕಳೆದ 18 ವರ್ಷಗಳಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಯಾವುದೇ ಭಾರತೀಯ ಮಹಿಳೆಯ ಜಂಟಿ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ. 2010ರಲ್ಲಿ ಕೃಷ್ಣಾ ಪೂನಿಯಾ ಕೂಡ ಆರನೇ ಸ್ಥಾನ ಪಡೆದಿದ್ದರು. 2004ರಲ್ಲಿ ಅಂಜು ಬಾಬಿ ಜಾರ್ಜ್ 5ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

26ರ ಹರೆಯದ ಕಮಲ್‌ಪ್ರೀತ್ ನಿಷೇಧಿತ ಡ್ರಗ್ ಸ್ಟ್ಯಾನೋಝೋಲೋಲ್ ಬಳಸಿದ್ದಕ್ಕಾಗಿ ಅವರ ಮೇಲೆ 3 ವರ್ಷಗಳ ಕಾಲ ನಿಷೇಧ ಹೇರಲಾಗಿದೆ ಎಂದು ಅಥ್ಲೆಟಿಕ್ಸ್ ಇಂಟೆಗ್ರಿಟಿ ಯೂನಿಟ್ ಘಟಕ ತಿಳಿಸಿ

ಈ ವರ್ಷದ ಫೆಬ್ರವರಿಯಲ್ಲಿ ಈ ನಿಷೇಧಿತ ಡ್ರಗ್ ಅನ್ನು ಎರಡು ಚಮಚ ಸೇವಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದ್ದು, ಈ ವರದಿಯ ಆದಾರದ ಮೇಲೆ ಅವರಿಗೆ 3 ವರ್ಷಗಳ ನಿಷೇಧ ಹೆರಲಾಗಿದೆ. ಕಮಲಪ್ರೀತ್ ಮೇಲಿನ ನಿಷೇಧವು ಮಾರ್ಚ್ 29, 2022 ರಿಂದ ಜಾರಿಗೆ ಬರಲಿದೆ.

27 ಸೆಪ್ಟೆಂಬರ್ 2022 ರಂದು ಕಮಲ್‌ಪ್ರೀತ್ ತನ್ನ ಮೇಲಿನ ಡೋಪಿಂಗ್ ವಿರೋಧಿ ನಿಯಮದ ಉಲ್ಲಂಘನೆಯ ಆರೋಪವನ್ನು ಒಪ್ಪಿಕೊಂಡಿರುವುದರಿಂದ ಶಿಕ್ಷೆಯಲ್ಲಿ ಒಂದು ವರ್ಷ ವಿನಾಯಿತಿ ನೀಡಿ, 3 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.
Published On - 10:39 am, Thu, 13 October 22



















