HS Prannoy Marriage: ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಭಾರತದ ಸ್ಟಾರ್ ಶಟ್ಲರ್; ಫೋಟೋ ನೋಡಿ
HS Prannoy Marriage: ಎಚ್ ಎಸ್ ಪ್ರಣಯ್ ಅವರು ಗೆಳತಿ ಶ್ವೇತಾ ರಾಚೆಲ್ ಥಾಮಸ್ ಅವರನ್ನು ವಿವಾಹವಾಗಿದ್ದು, ಈ ಇಬ್ಬರೂ ಅನ್ಯಧರ್ಮಿಯರೆಂಬುದು ವಿಶೇಷ. ಈ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
Updated on:Sep 15, 2022 | 4:24 PM

ಭಾರತ ತಂಡ ಥಾಮಸ್ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಎಚ್ ಎಸ್ ಪ್ರಣಯ್ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದ ಆಟಗಾರ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಎಚ್ ಎಸ್ ಪ್ರಣಯ್ ಅವರು ಗೆಳತಿ ಶ್ವೇತಾ ರಾಚೆಲ್ ಥಾಮಸ್ ಅವರನ್ನು ವಿವಾಹವಾಗಿದ್ದು, ಈ ಇಬ್ಬರೂ ಅನ್ಯಧರ್ಮಿಯರೆಂಬುದು ವಿಶೇಷ. ಇದಕ್ಕಾಗಿಯೇ ಈ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಪ್ರಣಯ್ ಮದುವೆಯ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದಂಪತಿಗಳು ಕುಟುಂಬ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದಾರೆ.

ಮದುವೆಯಲ್ಲಿ ನವ ಜೋಡಿಗಳು ದೇಸಿ ಉಡುಗೆಯಲ್ಲಿ ಮಿಂಚುತ್ತಿರುವುದನ್ನು ಕಾಣಬಹುದಾಗಿದೆ. ಫೋಟೋದ ಶೀರ್ಷಿಕೆಯಲ್ಲಿ ಪ್ರಣಯ್ ಅವರು 'Theeeeeeeee Day' ಎಂದು ಬರೆದು ಇದರೊಂದಿಗೆ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

ಪ್ರಣಯ್ ಅವರ ಪತ್ನಿ ಶ್ವೇತಾ ಕ್ವೆಟ್ಟಾದವರಾಗಿದ್ದು, ಡಿಜಿಟಲ್ ಫ್ಯಾಷನ್ ಮೇಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಅವರು ಅಮೇರಿಕನ್ ಐಷಾರಾಮಿ ಬ್ರಾಂಡ್ ಸಾಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಣಯ್ ಈ ತಿಂಗಳು ಮೊದಲ ಬಾರಿಗೆ ಶ್ವೇತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಅವರು ತಮ್ಮ ಗೆಳತಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಹಾಕಿರಲಿಲ್ಲ.

ಪ್ರಣಯ್ ದಾಂಪತ್ಯ ಜೀವನಕ್ಕೆ ಸಹ ಆಟಗಾರರು ಶುಭಾಶಯ ತಿಳಿಸಿದ್ದು, ಬ್ಯಾಡ್ಮಿಟನ್ ಸ್ಟಾರ್ ಸೈನಾ ನೆಹ್ವಾಲ್ ಅವರು ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಗ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಸ್ಟಾರ್ ಆಟಗಾರ ಸಾತ್ವಿಕ್ ಸಾಯಿ ರಾಜ್ ಅವರು ಸೆಪ್ಟೆಂಬರ್ 17 ಗಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪ್ರಣಯ್ ಅವರು ಸೆಪ್ಟೆಂಬರ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ ಎಂದು ವರದಿಯಾಗಿದೆ.
Published On - 4:24 pm, Thu, 15 September 22



















