- Kannada News Photo gallery If the last pillar breaks it will be end of Kali Yuga at Kedareshwar Cave Temple at Harishchandragad a hill fort in Ahmednagar in Maharashtra
End of Kali Yug: ಈ ಕೇದಾರನಾಥ ದೇಗುಲ ಅನೇಕ ಪವಾಡಗಳ ಆಲಯ, ನಾಲ್ಕು ಸ್ತಂಭಗಳಲ್ಲಿ ಆ ಕೊನೆಯ ಕಂಬ ಮುರಿದರೆ ಕಲಿಯುಗ ಅಂತ್ಯವಾಗಲಿದೆ!
ದೇಶ-ವಿದೇಶಗಳಲ್ಲಿ ಹಲವೆಡೆ ಭಕ್ತರು ಶಿವನನ್ನು ಭಾವಭಕ್ತಿಯಿಂದ ಪೂಜಿಸುತ್ತಾರೆ. ನಮ್ಮ ದೇಶದಲ್ಲಿ ಬೆಟ್ಟಗಳ ಮಧ್ಯದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವೂ ಒಂದೊಂದು ರಹಸ್ಯವನ್ನು ಅಡಗಿಸಿಕೊಂಡಿದೆ. ಅಂತಹ ಒಂದು ದೇವಾಲಯವೇ ಪುರಾಣ ಕಾಲದಿಂದಲೂ ಸ್ಥಾಪಿತಗೊಂಡಿರುವ ಕೇದಾರೇಶ್ವರ ಸ್ವಾಮಿ ಅಥವಾ ಕೇದಾರನಾಥ ದೇವಾಲಯ. ಏನೇ ಆಗಲಿ ಮಹಾಕಾಲನ ಲೀಲೆಗಳನ್ನು ಹುಲುಮಾನವ ವರ್ಣಿಸುವುದು ಸಾಧ್ಯವಾ? ಅದು ತರವಲ್ಲ.
Updated on: Apr 06, 2023 | 6:06 AM

ನಮ್ಮ ದೇಶದಲ್ಲಿ ನೈಸರ್ಗಿಕವಾಗಿ/ ಪ್ರಕೃತಿಯ ಮಧ್ಯೆ ಅನೇಕ ದೇವಾಲಯಗಳಿವೆ.. ಒಂದೊಂದು ದೇವಾಲಯವೂ ಒಂದೊಂದು ರಹಸ್ಯವನ್ನು ಅಡಗಿಸಿಕೊಂಡಿದೆ.. ಅಂತಹ ದೇವಾಲಯಗಳಲ್ಲಿ ಒಂದು ಕೇದಾರೇಶ್ವರ ಸ್ವಾಮಿ ದೇವಾಲಯ.

ಇದು ನಿಜಕ್ಕೂ ಅದ್ಭುತವೇ ಸರಿ. ನೋಡುಗರನ್ನು ಆಕರ್ಷಿಸುವ ಅದ್ಭುತ ಶಿಲ್ಪ ಸೌಧ ಇದು. ಮಹಾರಾಷ್ಟ್ರದ ಅಹಮದ್‌ನಗರದ ಹರಿಶ್ಚಂದ್ರಗಢ ಕೋಟೆಯಲ್ಲಿರುವ ಕೇದಾರೇಶ್ವರ ಸ್ವಾಮಿ ದೇವಾಲಯ ಇದು (Kedareshwar Cave Temple at Harishchandragad in Ahmednagar).

ಈ ದೇಗುಲದ ಮೇಲೆ ದೊಡ್ಡ ಬಂಡೆಯಿದೆ. ಅದರ ಕೆಳಗೆ 4 ಕಂಬಗಳ ಮೇಲೆ ಶಿವನ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಯಾವಾಗ ನಿರ್ಮಿಸಲಾಯಿತು ಎಂಬುದು ಇದುವರೆಗೆ ಯಾರಿಗೂ ತಿಳಿದಿಲ್ಲ.

ಈ ದೇವಾಲಯದಲ್ಲಿ 4 ಜೋಡಿಗಳ ಸಂಕೇತವಾಗಿ 4 ಕಂಬಗಳಿವೆ (pillars). ಭಕ್ತರು ಅವುಗಳನ್ನು ಸತ್ಯಯುಗ (Satya Yuga), ತ್ರೇತಾಯುಗ (Tretha Yuga), ದ್ವಾಪರ ಯುಗ (Dwapara Yuga) ಮತ್ತು ಕಲಿಯುಗ (Kali Yuga) ಸಂಕೇತವೆಂದು ಪರಿಗಣಿಸುತ್ತಾರೆ.

ಈ ದೇವಾಲಯದಲ್ಲಿನ ಕಂಬಗಳು ಪ್ರತಿ ಯುಗದ ಅಂತ್ಯದಲ್ಲಿ ಒಡೆಯುತ್ತವೆ. ಈಗ ನಾವು ಕಲಿಯುಗದಲ್ಲಿದ್ದೇವೆ, ಈ ದೊಡ್ಡ ಕಲ್ಲು ಕಂಬದ ಮೇಲಿದೆ. ಈ ಕಂಬ ಬಿದ್ದರೆ... ಆ ದಿನ ಕಲಿಯುಗದ ಕೊನೆಯ ದಿನವಾಗಲಿದೆ ಎನ್ನುತ್ತಾರೆ ಹಿರಿಯರು.

ಬೃಹತ್ ಗೋಪುರವನ್ನು ಹೊಂದಿರುವ ಈ ದೇವಾಲಯದ ಮತ್ತೊಂದು ಮಹತ್ತರವಾದ ವಿಷಯವೆಂದರೆ... ಈ ದೇವಾಲಯದ 4 ಗೋಡೆಗಳಿಂದ ಪ್ರತಿದಿನ ನೀರು ಬರುತ್ತಿರುತ್ತದೆ.. ಹಾಗಾಗಿ ಈ ದೇವಾಲಯ ಸದಾ ತುಂಬಾ ತಂಪಾಗಿರುತ್ತದೆ. ಯಾರೂ ಒಳಗೆ ಹೋಗುವುದಿಲ್ಲ.

ಮಳೆಗಾಲದಲ್ಲಿ ದೇವಸ್ಥಾನದೊಳಗೆ ಒಂದು ಹನಿ ನೀರು ಕೂಡ ಇರುವುದಿಲ್ಲ. ಅದೇ, ಬೇಸಿಗೆ ಮತ್ತು ಚಳಿಗಾಲದಲ್ಲಿ 5 ಅಡಿ ಎತ್ತರದಲ್ಲಿ ನೀರು ಇರುತ್ತದೆ! ಅಂದಹಾಗೆ ಚಿತ್ರದಲ್ಲಿ ಗೋಚರವಾಗುವಂತೆ 3 ಕಂಬಗಳು ಮುರಿದಿವೆ. ಅಂದರೆ ಮೂರು ಯುಗಗಳು ಮುಗಿದಿವೆ. ಇಲ್ಲಿರುವ ಕೊನೆಯ ಕಂಬ ಮುರಿದರೆ.. ಅಂದು ಕಲಿಯುಗ ಅಂತ್ಯವಾಗಲಿದೆ!



















