Women’s Day: ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಬೆಡಗಿಯರಿವರು

| Updated By: shivaprasad.hs

Updated on: Mar 08, 2022 | 7:40 AM

Nari Shakti of Noth East: ಈ ಬಾರಿಯ ಮಹಿಳಾ ದಿನಾಚರಣೆಗೆ ಭಾರತ ಸರ್ಕಾರ ಒಂದು ವಿಶೇಷತೆ ಕಲ್ಪಿಸಿದೆ. ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಈಶಾನ್ಯ ಪ್ರದೇಶಗಳ ಅಭಿವೃದ್ಧಿ ಸಚಿವಾಲಯವು ‘ಈಶಾನ್ಯದ ನಾರಿ ಶಕ್ತಿ’ ಎಂಬ ವಿಷಯದಲ್ಲಿ ಮಹಿಳಾ ದಿನಾಚರಣೆ ಆಚರಿಸುತ್ತಿದೆ. ಚಿತ್ರರಂಗದ ವಿಷಯಕ್ಕೆ ಬಂದರೆ ಬಾಲಿವುಡ್​ನಲ್ಲಿ ಈಶಾನ್ಯ ರಾಜ್ಯಗಳ ಕಥಾ ವಸ್ತು ಹೊಂದಿರುವ ಚಿತ್ರಗಳು, ಪಾತ್ರಗಳು ಕಡಿಮೆಯೆಂದೇ ಹೇಳಬೇಕು. ಪ್ರಸ್ತುತ ಈ ಆರೋಪದಿಂದ ಮುಕ್ತವಾಗಲು ಬಾಲಿವುಡ್ ಪ್ರಯತ್ನಿಸುತ್ತಿದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ತಮ್ಮ ಅಗಾಧ ಪ್ರತಿಭೆಯಿಂದ ಬಾಲಿವುಡ್ ಸೇರಿದಂತೆ ಭಾರತ ಹಾಗೂ ಅಂತಾರಾಷ್ಟ್ರೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಮೂಲದ ನಟಿಯರ ಪರಿಚಯ ‘ಮಹಿಳಾ ದಿನಾಚರಣೆ’ಯ ಈ ವಿಶೇಷ ಬರಹದಲ್ಲಿದೆ.

1 / 9
ಈ ಬಾರಿಯ ಮಹಿಳಾ ದಿನಾಚರಣೆಗೆ ಭಾರತ ಸರ್ಕಾರ ಒಂದು ವಿಶೇಷತೆ ಕಲ್ಪಿಸಿದೆ. ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಈಶಾನ್ಯ ಪ್ರದೇಶಗಳ ಅಭಿವೃದ್ಧಿ ಸಚಿವಾಲಯವು ‘ಈಶಾನ್ಯದ ನಾರಿ ಶಕ್ತಿ’ ಎಂಬ ವಿಷಯದಲ್ಲಿ ಮಹಿಳಾ ದಿನಾಚರಣೆ ಆಚರಿಸುತ್ತಿದೆ. ಚಿತ್ರರಂಗದ ವಿಷಯಕ್ಕೆ ಬಂದರೆ ಬಾಲಿವುಡ್​ನಲ್ಲಿ ಈಶಾನ್ಯ ರಾಜ್ಯಗಳ ಕಥಾ ವಸ್ತು ಹೊಂದಿರುವ ಚಿತ್ರಗಳು, ಪಾತ್ರಗಳು ಕಡಿಮೆಯೆಂದೇ ಹೇಳಬೇಕು. ಪ್ರಸ್ತುತ ಈ ಆರೋಪದಿಂದ ಮುಕ್ತವಾಗಲು ಬಾಲಿವುಡ್ ಪ್ರಯತ್ನಿಸುತ್ತಿದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ತಮ್ಮ ಅಗಾಧ ಪ್ರತಿಭೆಯಿಂದ ಬಾಲಿವುಡ್ ಸೇರಿದಂತೆ ಭಾರತ ಹಾಗೂ ಅಂತಾರಾಷ್ಟ್ರೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಮೂಲದ ನಟಿಯರ ಪರಿಚಯ ‘ಮಹಿಳಾ ದಿನಾಚರಣೆ’ಯ ಈ ವಿಶೇಷ ಬರಹದಲ್ಲಿದೆ.

2 / 9
ಕರೆನ್ ಡೇವಿಡ್: ಮೇಘಾಲಯದ ಶಿಲ್ಲಾಂಗ್​ನಲ್ಲಿ ಜನಿಸಿದ ಕರೆನ್ ಡೇವಿಡ್ ಜಗತ್ತಿನಾದ್ಯಂತ ಗಮನ ಸೆಳೆದಿರುವ ಈಶಾನ್ಯ ಭಾರತದ ಪ್ರತಿಭೆ. ಭಾರತ- ಕೆನಡಾ ಮೂಲದ ಈ ನಟಿ, ಗಾಯನ ಹಾಗೂ ಗೀತ ರಚನಕಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಎಬಿಸಿಯಲ್ಲಿ ಪ್ರಸಾರವಾದ ಮ್ಯೂಸಿಕಲ್ ಕಾಮಿಡಿ ಸೀರೀಸ್ ‘ಗಲವಂತ್’ನಲ್ಲಿ ಪ್ರಿನ್ಸಸ್ ಇಸಬೆಲ್ಲಾ ಮರಿಯಾ ಲೂಸಿಯಾ ಎಲಿಜಬೆತ್ ಪಾತ್ರ ಕರೆನ್​ಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ಈಗಲೂ ನಟಿ ಅಂತಾರಾಷ್ಟ್ರೀಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಎ.ಆರ್ ರೆಹಮಾನ್ ಸೇರಿದಂತೆ ಖ್ಯಾತ ತಾರೆಯರೊಂದಿಗೆ ನಟಿ ಕೆಲಸ ಮಾಡಿದ್ದಾರೆ.

3 / 9
ಆಂಡ್ರಿಯಾ ತರಿಯಾಂಗ್: ಆಂಡ್ರಿಯಾ ತರಿಯಾಂಗ್ ಪ್ರಸಿದ್ಧ ಭಾರತೀಯ ನಟಿ, ಗಾಯಕಿ, ಸಂಗೀತಗಾರ್ತಿ ಮತ್ತು ರೂಪದರ್ಶಿ. 2016 ರಲ್ಲಿ ಅನಿರುದ್ಧ ರಾಯ್ ಚೌಧರಿ ನಿರ್ದೇಶನದ 'ಪಿಂಕ್' ಮೂಲಕ ನಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು ಮೊದಲಾದವರೊಂದಿಗೆ ಆಂಡ್ರಿಯಾ ನಟಿಸಿದ್ದರು. ಆ ಚಿತ್ರದ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ಅಷ್ಟೇ ಅಲ್ಲದೇ, ಈಶಾನ್ಯ ಭಾರತದ ಜನರು ಭಾರತದ ವಿವಿದೆಡೆ ಎದುರಿಸುವ ಸಮಸ್ಯೆಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು.

4 / 9
ಗೀತಾಂಜಲಿ ಥಾಪಾ: ಸಿಕ್ಕಿಂನಲ್ಲಿ ಹುಟ್ಟಿ ಬೆಳೆದ, ಅಪ್ರತಿಮ ಸುಂದರಿ ಗೀತಾಂಜಲಿ ಥಾಪಾ, ‘ಲೈಯರ್ಸ್ ಡೈಸ್‌’ನಲ್ಲಿನ ಪಾತ್ರ ನಿರ್ವಹಣೆಗೆ ‘ಅತ್ಯುತ್ತಮ ನಟಿ’ ವಿಭಾಗದಲ್ಲಿ 61 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದರು. ಅವರ ಚಲನಚಿತ್ರ ‘ಮಾನ್ಸೂನ್ ಶೂಟೌಟ್’ ಪ್ರತಿಷ್ಠಿತ  ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು. ‘ಸೇಕ್ರೆಡ್ ಗೇಮ್ಸ್’, ‘ಟ್ರ್ಯಾಪ್ಡ್’ ಚಿತ್ರದ ನಟನೆಯ ಮೂಲಕವೂ ಗೀತಾ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

5 / 9
ಲಿನ್ ಲೈಶ್ರಮ್: ಮೂಲತಃ ಮಣಿಪುರದ ಇಂಫಾಲ್‌ನಿಂದ ಬಂದಿರುವ ಲಿನ್ ಲೈಶ್ರಮ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡೆಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ, ಉದ್ಯಮಿಯಾಗಿಯೂ ಅವರು ಖ್ಯಾತರಾಗಿದ್ದಾರೆ. ವಿಶಾಲ್ ಭಾರದ್ವಾಜ್ ಅವರ ‘ರಂಗೂನ್’ ನಲ್ಲಿ ಸೈಫ್ ಅಲಿ ಖಾನ್, ಶಾಹಿದ್ ಕಪೂರ್ ಮತ್ತು ಕಂಗನಾ ಅವರೊಂದಿಗೆ ಲಿನ್ ಕಾಣಿಸಿಕೊಂಡಿದ್ದರು. ‘ಓಂ ಶಾಂತಿ ಓಂ’, ‘ಮೇರಿ ಕೋಮ್’ ಚಿತ್ರಗಳಲ್ಲೂ ನಟಿ ಕಾಣಿಸಿಕೊಂಡಿದ್ದಾರೆ. ಲೈಶ್ರಾಮ್ ಅವರು ಜಮ್ಶೆಡ್‌ಪುರದ ಟಾಟಾ ಆರ್ಚರಿ ಅಕಾಡೆಮಿಯಿಂದ ಪ್ರಸಿದ್ಧ ತರಬೇತಿ ಪಡೆದ ಬಿಲ್ಲುಗಾರರೂ ಹೌದು.

6 / 9
ಊರ್ಮಿಳಾ ಮಹಾಂತ್: ಗುವಾಹಟಿಯಲ್ಲಿ ಜನಿಸಿದ ಊರ್ಮಿಳಾ ಮಹಾಂತ್, ಎಫ್‌ಟಿಐಐ ಮಾಜಿ ವಿದ್ಯಾರ್ಥಿನಿ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 2012 ರ ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರ ‘ವಳಕ್ಕು ಎನ್ 18/9’ ಮೂಲಕ ನಟಿ ಪದಾರ್ಪಣೆ ಮಾಡಿದರು. ಅದಕ್ಕೂ ಮೊದಲು ಊರ್ಮಿಳಾ ವಿವಿಧ ನಾಟಕಗಳು, ಕಿರುಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ್ದ ’Ballad of Rustom’ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು.

7 / 9
ಪತ್ರಲೇಖಾ: ಮೇಘಾಲಯದ ಶಿಲ್ಲಾಂಗ್ ಮೂಲದ ನಟಿ ಪತ್ರಲೇಖಾ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದು ‘ಸಿಟಿ ಲೈಟ್ಸ್’ ಚಿತ್ರದ ಮೂಲಕ. ಇದರಲ್ಲಿ ಅವರೊಂದಿಗೆ ಜೋಡಿಯಾಗಿ ನಟಿಸಿದ್ದು ರಾಜ್​ಕುಮಾರ್ ರಾವ್. ವಿಶೇಷವೆಂದರೆ 11 ವರ್ಷಗಳ ದೀರ್ಘಕಾಲದ ಒಡನಾಟದ ನಂತರ ಈ ತಾರಾ ಜೋಡಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

8 / 9
ದೀಪನ್ನಿತಾ ಶರ್ಮಾ: ಅಸ್ಸಾಂನಲ್ಲಿ ಹುಟ್ಟಿ ಬೆಳೆದ ದೀಪನ್ನಿತಾ ಶರ್ಮಾ, ಬಾಲಿವುಡ್ ನಟಿ. 2008ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಅವರು ಕಾಣಿಸಿಕೊಂಡು ಗಮನ ಸೆಳೆದಿದ್ದರು. ಹಲವಾರು ಜಾಹಿರಾತುಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಅವರು 16 ಡಿಸೆಂಬರ್, ಮೈ ಬ್ರದರ್… ನಿಖಿಲ್, ಲೇಡೀಸ್ vs ರಿಕಿ ಬಹ್ಲ್, ಪಿಜ್ಜಾ, ರಾತ್ ಬಾಕಿ ಹೈ ಮೊದಲಾದ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.

9 / 9
ಬಲಾ ಹಿಜಾಮ್: ಮಣಿಪುರಿ ಮೂಲದ ಈ ನಟಿ ದಕ್ಷಿಣ ಭಾರತೀಯರಿಗೆ ಮಲಯಾಳಂ ಚಿತ್ರ ‘ನೀಲಾಕಾಶಂ ಪಚ್ಚಕಡಲ್ ಚುವನ್ನಭೂಮಿ’ ಮೂಲಕ ಪರಿಚಯ. ಬಹುಭಾಷೆಗಳಲ್ಲಿ ಕಾಣಿಸಿಕೊಂಡಿರುವ ಈ ನಟಿ, ಮಣಿಪುರಿ ಚಿತ್ರರಂಗದ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜಿಂದಗಿ ಆನ್ ದಿ ರಾಕ್ಸ್, ತೆಲ್ಲಂಗಾ ಮಾಮೇ, ಮಣಿಪುರ ಎಕ್ಸ್‌ಪ್ರೆಸ್ ಮೊದಲಾದ ಚಿತ್ರಗಳಲ್ಲಿ ನಟನೆಯ ಮೂಲಕ ಬಲಾ ಗಮನ ಸೆಳೆದಿದ್ದಾರೆ.