- TV9 Kannada Kannada News Photos Isha Ambani to Anant Ambani Here is how Aishwarya Rai Life changed Entertainment News In Kannada
ಅಂಬಾನಿ ಮನೆಯ ಮೂರು ಮದುವೆ ಮುಗಿಯುವುದರೊಳಗೆ ಹೇಗಿದ್ದ ಐಶ್ವರ್ಯಾ ಸಂಸಾರ ಹೇಗಾಯಿತು ನೋಡಿ
ಮುಕೇಶ್ ಅಂಬಾನಿ ಮನೆಯಲ್ಲಿ ಈಗಾಗಲೇ ಮೂರು ಮದುವೆಗಳು ನಡೆದಿವೆ. ಮೊದಲು ಇಶಾ ಅಂಬಾನಿ, ಆ ಬಳಿಕ ಆಕಾಶ್ ಅಂಬಾನಿ ಹಾಗೂ ಈಗ ಅನಂತ್ ಅಂಬಾನಿ ಮದುವೆ ನಡೆದಿದೆ. ಮೊದಲ ಎರಡು ಮದುವೆಗೆ ಒಟ್ಟಾಗಿ ಬಂದಿದ್ದ ಅಭಿಷೇಕ್-ಐಶ್ವರ್ಯಾ ಈಗ ಬೇರೆ ಬೇರೆ ಬಂದಿದ್ದಾರೆ.
Updated on: Jul 16, 2024 | 8:04 AM

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯಾ ಜೊತೆ ಇಶಾ ಅಂಬಾನಿ ಮದುವೆಗೆ ಬಂದಿದ್ದರು. ಈ ವಿವಾಹ ಕಾರ್ಯ 2018ರ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಇವರು ಒಟ್ಟಾಗಿ ಇದ್ದರು.

2019ರ ಮಾರ್ಚ್ ತಿಂಗಳಲ್ಲಿ ಆಕಾಶ್ ಅಂಬಾನಿ ವಿವಾಹ ಏರ್ಪಟ್ಟಿತ್ತು. ಈ ಮದುವೆ ಕಾರ್ಯ ಅದ್ದೂರಿಯಾಗಿ ನೆರವೇರಿತ್ತು. ಈ ವಿವಾಹಕ್ಕೂ ಅಭಿಷೇಕ್-ಐಶ್ವರ್ಯಾ ಮಗಳ ಜೊತೆ ಬಂದಿದ್ದರು. ಈ ಫೋಟೋಗಳು ಗಮನ ಸೆಳೆದಿದ್ದವು.

ಆಕಾಶ್ ವಿವಾಹ ನಡೆದು ಐದು ವರ್ಷಗಳು ಕಳೆದಿವೆ. ಈಗ ಐಶ್ವರ್ಯಾ ಹಾಗೂ ಅಭಿಷೇಕ್ ಸಂಸಾರದಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಅಭಿಷೇಕ್ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಿ ಬಂದು ಪೋಸ್ ಕೊಟ್ಟಿದ್ದಾರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಐಶ್ವರ್ಯಾ ಅವರು ಮಗಳ ಆರಾಧ್ಯಾ ಜೊತೆ ಅನಂತ್ ಅಂಬಾನಿ ಮದುವೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅಭಿಷಕ್ ಬಚ್ಚನ್ ಅವರು ಪತ್ನಿ ಜೊತೆ ಕಾಣಿಸಿಕೊಂಡಿರಲಿಲ್ಲ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಐಶ್ವರ್ಯಾ ಅವರು ಭಾರತದ ಶ್ರೀಮಂತ ನಟಿಯರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಒಂದೊಮ್ಮೆ ಪತಿಯಿಂದ ಅವರು ವಿಚ್ಛೇದನ ಪಡೆದರೂ ಅಂತಹ ವ್ಯತ್ಯಾಸ ಏನೂ ಆಗುವುದಿಲ್ಲ.

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



