ನಟ ಜಗ್ಗೇಶ್ ಅವರು ರಾಜಕೀಯದಲ್ಲೂ ಯಶಸ್ಸು ಕಾಣುತ್ತಿದ್ದಾರೆ. ರಾಜ್ಯಸಭೆಗೆ ಆಯ್ಕೆ ಆಗಿರುವ ಅವರು ಇಂದು (ಜುಲೈ 8) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಸಿನಿಮಾದಲ್ಲಿ ಮಿಂಚಿದ ಬಳಿಕ ಜಗ್ಗೇಶ್ ಅವರು ರಾಜಕೀಯಕ್ಕೆ ಕಾಲಿಟ್ಟರು. ಈಗ ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ರಾಜ್ಯಸಭಾ ಸದಸ್ಯನಾಗಿ ಅವರು ಈಗ ಕೆಲಸ ಆರಂಭಿಸಿದ್ದಾರೆ.
ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅವರು ದೆಹಲಿಯಲ್ಲಿ ಇರುವ ರಾಯರ ಮಠಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ಪತ್ನಿ ಪರಿಮಳಾ ಜಗ್ಗೇಶ್ ಕೂಡ ಸಾಥ್ ನೀಡಿದ್ದಾರೆ.
ತಮ್ಮ ಬದುಕಿನ ಎಲ್ಲ ಯಶಸ್ಸಿಗೆ ಗುರು ರಾಯರ ಅನುಗ್ರಹವೇ ಕಾರಣ ಎಂದು ಜಗ್ಗೇಶ್ ನಂಬಿದ್ದಾರೆ. ಈ ಬಗ್ಗೆ ಅವರು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದುಂಟು. ಆಗಾಗ ಅವರು ಮಂತ್ರಾಲಯಕ್ಕೂ ಭೇಟಿ ನೀಡುತ್ತಾರೆ.
ಬಿಜೆಪಿಯಲ್ಲಿ ಜಗ್ಗೇಶ್ ಸಕ್ರಿಯರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ರಾಜ್ಯಸಭೆಯಲ್ಲಿ ಜಗ್ಗೇಶ್ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.
Published On - 12:28 pm, Fri, 8 July 22