
ನಟಿ ಜಾನ್ವಿ ಕಪೂರ್ ಅವರು ಒಂದು ದೊಡ್ಡ ಗೆಲುವಿಗಾಗಿ ಕಾದು ಕೂತಿದ್ದಾರೆ. ಆದರೆ, ಅದೃಷ್ಟ ಅವರ ಕೈ ಹಿಡಿಯುತ್ತಿಲ್ಲ. ಮಾಡಿದ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೋಲು ಕಾಣುತ್ತಿವೆ.

ಜಾನ್ವಿ ಕಪೂರ್ ಅವರು ಈಗ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದಾರೆ. ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಾರೆ. ಈ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಾನ್ವಿ ಕಪೂರ್ ಅವರು ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಕ್ರೀಡಾಧಾರಿತ ಸಿನಿಮಾ.

ಕ್ರೀಡಾಧಾರಿತ ಸಿನಿಮಾ ಎಂದರೆ ಅದಕ್ಕೆ ಒಂದಷ್ಟು ತಯಾರಿ ಬೇಕೆ ಬೇಕು. ಈ ಕಾರಣಕ್ಕೆ ಜಾನ್ವಿ ಕಪೂರ್ ಅವರು ಕ್ರಿಕೆಟ್ ಆಡುವುದರ ತರಬೇತಿ ಪಡೆಯುತ್ತಿದ್ದಾರೆ. ಈ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.

ಆರಂಭದಲ್ಲಿ ಜಾನ್ವಿ ಕಪೂರ್ ನಟನೆ ಬಗ್ಗೆ ಅನೇಕರು ಕೊಂಕು ತೆಗೆದಿದ್ದರು. ದಿನಕಳೆದಂತೆ ಅವರು ನಟನೆಯಲ್ಲಿ ಪಳಗುತ್ತಿದ್ದಾರೆ.