ನಟಿ ಜಾನ್ವಿ ಕಪೂರ್ ಅವರು ಸದಾ ಹಾಟ್ ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ವಾರಕ್ಕೆ ಒಂದಾದರೂ ಹೊಸ ಫೋಟೋಶೂಟ್ ಮಾಡಿಸಿ ಫೋಟೋ ಹಂಚಿಕೊಳ್ಳುವ ರೂಢಿ ಬೆಳೆಸಿಕೊಂಡಿದ್ದಾರೆ.
ಜಾನ್ವಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಎಲ್ಲರೂ ಮಣೆ ಹಾಕುತ್ತಾರೆ. ಹೀಗಾಗಿ, ಒಳ್ಳೊಳ್ಳೆಯ ಆಫರ್ ಅವರ ಕೈ ಸೇರುತ್ತಿದೆ.
ಜಾನ್ವಿ ಅವರು ಇತ್ತೀಚೆಗೆ ಹಾಟ್ ಫೋಟೋಶೂಟ್ ಮಾಡಿಸಿದ್ದರು. ಅದಕ್ಕಾಗಿ ಅನೇಕರು ಶ್ರಮಿಸಿದ್ದರು. ಈ ಫೋಟೋಶೂಟ್ನ ಮೇಕಿಂಗ್ಅನ್ನು ಫೋಟೋ ಮೂಲಕವೇ ಜಾನ್ವಿ ತೋರಿಸಿದ್ದಾರೆ.
‘ಗುಡ್ ಲಕ್ ಜೆರ್ರಿ’, ‘ಮಿಲಿ’, ‘ಬವಾಲ್’ ಮತ್ತು ‘ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಸಿನಿಮಾ ಈ ವರ್ಷ ಅಕ್ಟೋಬರ್ 7ರಂದು ತೆರೆಗೆ ಬರುತ್ತಿದೆ. ‘ಬವಾಲ್’ 2023ರ ಏಪ್ರಿಲ್ 7ರಂದು ಬಿಡುಗಡೆ ಆಗುತ್ತಿದೆ.