
ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಿಕ್ಕಿಲ್ಲ. ಈ ವಿಚಾರದಲ್ಲಿ ಅಭಿಮಾನಿಗಳಿಗೂ ಬೇಸರ ಇದೆ.

ಶ್ರೀದೇವಿ ಪುತ್ರಿ ಎಂಬ ಕಾರಣಕ್ಕೆ ಬಾಲಿವುಡ್ನಲ್ಲಿ ಜಾನ್ವಿ ಕಪೂರ್ ಅವರಿಗೆ ಅವಕಾಶ ಸುಲಭವಾಗಿ ಸಿಕ್ಕಿತು. ಹಾಗಿದ್ದರೂ ಕೂಡ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಅವರು ಹಲವು ಬಗೆಯಲ್ಲಿ ಕಷ್ಟಪಡುತ್ತಿದ್ದಾರೆ.

ಜಾನ್ವಿ ಕಪೂರ್ ನಟನೆಯ ‘ಮಿಲಿ’ ಸಿನಿಮಾ ನವೆಂಬರ್ 4ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಕೆಲವು ಮೇಕಿಂಗ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಒಮ್ಮೆಲೇ ನೋಡಿದ ಫ್ಯಾನ್ಸ್ ಗಾಬರಿ ಆಗಿದ್ದಾರೆ.

ದೊಡ್ಡ ಫ್ರೀಜರ್ ಒಳಗೆ ಸಿಕ್ಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಒದ್ದಾಡುವ ಯುವತಿಯ ಪಾತ್ರದಲ್ಲಿ ಜಾನ್ವಿ ಕಪೂರ್ ಅವರು ನಟಿಸಿದ್ದಾರೆ. ಆ ಚಿತ್ರದ ಮೇಕಿಂಗ್ ಸ್ಟಿಲ್ಗಳು ಈಗ ವೈರಲ್ ಆಗಿವೆ. ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಅಂದಹಾಗೆ, ಇದು ಮಲಯಾಳಂನ ‘ಹೆಲನ್’ ಸಿನಿಮಾದ ಹಿಂದಿ ರಿಮೇಕ್. ಇದನ್ನು ಉತ್ತರ ಭಾರತದ ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಈ ಶುಕ್ರವಾರ (ನ.4) ಉತ್ತರ ಸಿಗಲಿದೆ. ಈ ಚಿತ್ರಕ್ಕಾಗಿ ಜಾನ್ವಿ ಕಪೂರ್ ಅವರು ಸಖತ್ ಪ್ರಚಾರ ಮಾಡಿದ್ದಾರೆ.
Published On - 3:52 pm, Thu, 3 November 22