
ಕಳೆದ ಅಕ್ಟೋಬರ್ ತಿಂಗಳಲ್ಲಿ ಉದ್ಯಮಿ ಗೌತಮ್ ಜತೆ ಕಾಜಲ್ ಮದುವೆ ಆಗಿದ್ದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುವ ದಂಪತಿ, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಈಗ ಕಾಜಲ್ ಬಿಕಿನಿ ತೊಟ್ಟು ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮದುವೆ ನಂತರದಲ್ಲಿ ಬಿಕಿನಿ ತೊಡೋದು ಕೆಲ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ. ಈ ಕಾರಣಕ್ಕೆ ಕಮೆಂಟ್ನಲ್ಲಿ ಟ್ರೋಲ್ ಆದ ಉದಾಹರಣೆ ಸಾಕಷ್ಟಿದೆ.

ಈ ಕಾರಣಕ್ಕೆ ಬಿಕಿನಿ ಫೋಟೋಗಳಿಗೆ ಕಮೆಂಟ್ ಆಯ್ಕೆಯನ್ನು ಕಾಜಲ್ ತೆಗೆದಿದ್ದಾರೆ. ಹೀಗಾಗಿ, ಬಿಕಿನಿ ಫೋಟೋದ ಬಗ್ಗೆ ಅಭಿಮಾನಿಗಳು ಮಾತನಾಡುವಂತಿಲ್ಲ.

ಮಾಧ್ಯಮಗಳ ಜತೆ ಮಾತನಾಡಿದ್ದ ಕಾಜಲ್, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ’ ಎಂದಿದ್ದರು.

ಕಾಜಲ್ ಹೇಳಿಕೆ ಅವರ ಅಭಿಮಾನಿಗಳಿಗೆ ಬೇಸರ ಹಾಗೂ ಆತಂಕ ಮೂಡಿಸಿತ್ತು.

ಕಾಜಲ್