
ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ, ನಟ ಸಂತೋಷ್ ಬಾಲರಾಜ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಜಾಂಡೀಸ್ನಿಂದ ಬಳಲುತ್ತಿರುವ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಮಾರಸ್ವಾಮಿ ಲೇಔಟ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ‘ಕರಿಯ 2’, ‘ಕೆಂಪ’, ‘ಗಣಪ’, ‘ಬರ್ಕ್ಲಿ’, ‘ಸತ್ಯ’ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ಅವರು ಅಭಿನಯಿಸಿದ್ದಾರೆ.

ಈಗ ಸಂತೋಷ್ ಬಾಲರಾಜ್ ಅವರಿಗೆ 34 ವರ್ಷ ವಯಸ್ಸು. ಜಾಂಡಿಸ್ ಮೈಗೆಲ್ಲ ಹರಡಿದ ಕಾರಣ ಅವರ ಪರಿಸ್ಥಿತಿ ಗಂಭೀರ ಆಗಿದೆ. ಸಂತೋಷ್ ಅವರು ತಾಯಿಯ ಜೊತೆ ಇದ್ದಾರೆ. ಇನ್ನೂ ಮದುವೆ ಆಗಿಲ್ಲ.

ಸಂತೋಷ್ ತಂದೆ ಅನೇಕಲ್ ಬಾಲರಾಜ್ ಅವರು ದರ್ಶನ್ ನಟನೆಯ ಕರಿಯ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ನಟನಾಗಿ ಸಂತೋಷ್ ಬಾಲರಾಜ್ ಅವರು ಗುರುತಿಸಿಕೊಂಡಿದ್ದರು.

ಸದ್ಯ ಸಂತೋಷ್ ಬಾಲರಾಜ್ ಅವರು ಕೋಮಾದಲ್ಲಿದ್ದಾರೆ. ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂತೋಷ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು, ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ.