Updated on: Aug 02, 2022 | 12:49 PM
ಸಿನಿಮಾದಲ್ಲಿ ಯಶಸ್ಸು ಪಡೆಯುವುದಕ್ಕೂ ಮುನ್ನ ನಟಿ ಅದಿತಿ ಪ್ರಭುದೇವ ಅವರು ಧಾರಾವಾಹಿ ಲೋಕದಲ್ಲಿ ಸಕ್ರಿಯರಾಗಿದ್ದರು. ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ಅವರು ಮಾಡಿದ ಪಾತ್ರ ಸಖತ್ ಗಮನ ಸೆಳೆಯಿತು. ಅವರ ಲುಕ್ ಆಕರ್ಷಕವಾಗಿತ್ತು.
‘ನಾಗಿಣಿ’ ಧಾರಾವಾಹಿಯಲ್ಲಿ ನಟಿ ದೀಪಿಕಾ ದಾಸ್ ಅವರು ಮಿಂಚು ಹರಿಸಿದ್ದರು. ಆ ಸೀರಿಯಲ್ನಿಂದ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತ್ತು. ‘ನಾಗಿಣಿ 2’ನಲ್ಲೂ ಅವರು ಅತಿಥಿ ಪಾತ್ರ ಮಾಡಿದರು.
‘ನಾಗಿಣಿ 2’ ಸೀರಿಯಲ್ನಲ್ಲಿ ನಟಿ ನಮ್ರತಾ ಗೌಡ ಅವರು ನಾಗಿಣಿಯ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೂಡ ಜನಮೆಚ್ಚುಗೆ ಪಡೆದುಕೊಂಡಿದೆ. ನಾಗಿಣಿ ಮತ್ತು ಶಿವಾನಿ ಎಂಬ 2 ಪಾತ್ರಕ್ಕೆ ನಮ್ರತಾ ಗೌಡ ಜೀವ ತುಂಬುತ್ತಿದ್ದಾರೆ.
ನಟಿ ಸಂಗೀತಾ ಭಟ್ ಅವರು ‘ಶ್ರೀ ಎಡೆಯೂರು ಸಿದ್ದಲಿಂಗೇಶ್ವರ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ‘ನಾಗಮಣಿ ರಹಸ್ಯ’ ವಿಶೇಷ ಸಂಚಿಕೆಯಲ್ಲಿ ಅವರು ನಾಗಿಣಿಯಾಗಿ ಕಾಣಿಸಿಕೊಂಡಿದ್ದಾರೆ.
ಸರ್ಪ ಲೋಕದ ಅತಿಮಾನುಷ ಕಥೆ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಸಖತ್ ಇಷ್ಟ. ಹಾಗಾಗಿ ನಾಗಿಣಿ ರೀತಿಯ ಪಾತ್ರಗಳು ಯಾವಾಗಲೂ ಹೈಲೈಟ್ ಆಗುತ್ತವೆ.