Updated on:May 02, 2023 | 7:08 AM
ನಟಿ ಅಮೂಲ್ಯ ಅವರು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವಳಿ ಮಕ್ಕಳ ಫೋಟೋಗಳನ್ನು ಅವರು ಆಗಾಗ ಶೇರ್ ಮಾಡಿಕೊಳ್ಳುತ್ತಾರೆ. ಇದರ ಜೊತೆಗೆ ಅಭಿಮಾನಿಗಳಿಗಾಗಿ ಅವರು ತಮ್ಮ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. (ಚಿತ್ರ ಕೃಪೆ: ಅಮೂಲ್ಯ ಇನ್ಸ್ಟಾಗ್ರಾಮ್)
ಅಮೂಲ್ಯ ಅವರು ತಮ್ಮ ಫೋಟೋ ಪೋಸ್ಟ್ ಮಾಡಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಅಮೂಲ್ಯ ಫೋಟೋಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. (ಚಿತ್ರ ಕೃಪೆ: ಅಮೂಲ್ಯ ಇನ್ಸ್ಟಾಗ್ರಾಮ್)
ಅಮೂಲ್ಯ ಫೋಟೋಗೆ ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ. ‘ನೀವೆಷ್ಟು ಕ್ಯೂಟ್ ಮೇಡಂ. ಈ ಫೋಟೋದಲ್ಲಿ ನೀವು ತುಂಬಾನೇ ಚೆಂದ. ಆದರೂ, ನಿಮ್ಮ ಮಕ್ಕಳಷ್ಟು ಅಲ್ಲ’ ಎಂದು ಅಭಿಮಾನಿ ಕಮೆಂಟ್ ಮಾಡಿದ್ದಾನೆ. (ಚಿತ್ರ ಕೃಪೆ: ಅಮೂಲ್ಯ ಇನ್ಸ್ಟಾಗ್ರಾಮ್)
ಸದ್ಯ ಅಮೂಲ್ಯ ಫೋಟೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಈ ಫೋಟೋಗೆ 40 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. (ಚಿತ್ರ ಕೃಪೆ: ಅಮೂಲ್ಯ ಇನ್ಸ್ಟಾಗ್ರಾಮ್)
ಅಮೂಲ್ಯ ಅವರು ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಅವರು ಚಿತ್ರರಂಗಕ್ಕೆ ಮರಳಬೇಕು, ಹೊಸ ಸಿನಿಮಾ ಒಪ್ಪಿಕೊಂಡು ನಟಿಸಬೇಕು ಎಂಬುದು ಫ್ಯಾನ್ಸ್ ಕೋರಿಕೆ. ಇತ್ತೀಚೆಗೆ ಅವರು ಹಂಚಿಕೊಂಡಿದ್ದ ಮಕ್ಕಳ ಫೋಟೋ ಗಮನ ಸೆಳೆದಿತ್ತು. (ಚಿತ್ರ ಕೃಪೆ: ಅಮೂಲ್ಯ ಇನ್ಸ್ಟಾಗ್ರಾಮ್)
Published On - 6:30 am, Tue, 2 May 23