ಒಂದು ವಿಶೇಷ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದ ‘ಕನ್ನಡತಿ’ ನಟಿ ರಂಜನಿ ರಾಘವನ್
TV9 Web | Updated By: ರಾಜೇಶ್ ದುಗ್ಗುಮನೆ
Updated on:
Jul 25, 2022 | 6:30 PM
‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಸಖತ್ ಸೈಲೆಂಟ್. ತುಂಬಾ ಸ್ವಾಭಿಮಾನಿ. ಅವರ ಸ್ವಾಭಿಮಾನಕ್ಕೆ ಧಕ್ಕೆ ಆಗುವಂತಹ ಪರಿಸ್ಥಿತಿ ಬಂದರೆ ಅವರು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೂ ಅವರ ಪಾತ್ರ ಅನೇಕರಿಗೆ ಇಷ್ಟ.
1 / 5
ನಟಿ ರಂಜನಿ ರಾಘವನ್ ಅವರು ಹಲವು ಕಾರಣಗಳಿಗೆ ಇಷ್ಟವಾಗುತ್ತಾರೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರದ ಮೂಲಕ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರ ಈ ಪಾತ್ರ ಫ್ಯಾನ್ಸ್ಗೆ ಸಖತ್ ಇಷ್ಟವಾಗಿದೆ. ಚಿತ್ರ ಕೃಪೆ: Instagram
2 / 5
‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಸಖತ್ ಸೈಲೆಂಟ್. ತುಂಬಾ ಸ್ವಾಭಿಮಾನಿ. ಅವರ ಸ್ವಾಭಿಮಾನಕ್ಕೆ ಧಕ್ಕೆ ಆಗುವಂತಹ ಪರಿಸ್ಥಿತಿ ಬಂದರೆ ಅವರು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೂ ಅವರ ಪಾತ್ರ ಅನೇಕರಿಗೆ ಇಷ್ಟ.ಚಿತ್ರ ಕೃಪೆ: Instagram
3 / 5
‘ಕನ್ನಡತಿ’ ಧಾರಾವಾಹಿ ಮೂಲಕ ಕನ್ನಡದ ಬಗ್ಗೆ ಪ್ರೀತಿ ಸಾರುವ ಪ್ರಯತ್ನ ಆಗುತ್ತಿದೆ. ನಿಜ ಜೀವನದಲ್ಲೂ ರಂಜನಿ ಅವರಿಗೆ ಕನ್ನಡದ ಮೇಲೆ ಅಪಾರ ಅಭಿಮಾನ ಇದೆ. ಅವರು ಸ್ವತಃ ಒಂದು ಕಥಾ ಸಂಕಲವನ್ನು ಹೊರ ತಂದಿದ್ದಾರೆ ಅನ್ನೋದು ವಿಶೇಷ. ಚಿತ್ರ ಕೃಪೆ: Instagram
4 / 5
ರಂಜನಿ ಅವರು ಇತ್ತೀಚೆಗೆ ‘ಮೈಸೂರು ಸಾಹಿತ್ಯ ಸಂಭ್ರಮ’ದಲ್ಲಿ ಭಾಗಿ ಆಗಿದ್ದರು. ಈ ಸುಂದರ ಕ್ಷಣಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ಕೃಪೆ: Instagram
5 / 5
ರಂಜನಿ ಅವರು ಹಿರಿತೆಯರೆಯಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಚಿತ್ರಕ್ಕೆ ದಿಗಂತ್ ಹೀರೋ. ಚಿತ್ರ ಕೃಪೆ: Instagram