ನಟ ಕಾರ್ತಿಕ್ ಆರ್ಯನ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಕಾರ್ತಿಕ್ ಆರ್ಯನ್ ಕೆಲ ತಿಂಗಳ ಹಿಂದೆ ವಿದೇಶದಿಂದ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿ ತಂದಿದ್ದರು. ಈಗ ಇದೇ ಕಾರಿನಲ್ಲಿ ತೆರಳಿ ಅವರು ರಸ್ತೆ ಬದಿಯ ತಿಂಡಿಗಳನ್ನು ಸವಿದಿದ್ದಾರೆ.
ಕೆಲ ಫೋಟೋಗಳನ್ನು ಆರ್ಯನ್ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಲ್ಯಾಂಬೋರ್ಗಿನಿ ಕಾರಿನ ಬೊನೆಟ್ ಮೇಲೆ ಚೈನೀಸ್ ತಿನಿಸುಗಳನ್ನು ಅವರು ಸವಿದಿದ್ದಾರೆ.