- Kannada News Photo gallery Kiara Advani and Sidharth Malhotra Wedding venue jaisalmer suryagarh palace Photos
ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮದುವೆ ಆಗುತ್ತಿರುವ ಪ್ಯಾಲೇಸ್ ಹೇಗಿದೆ ನೋಡಿ
Kiara Advani Sidharth Malhotra Wedding: ಕಿಯಾರಾ ಹಾಗೂ ಸಿದ್ದಾರ್ಥ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈಗ ಇವರ ಪ್ರೀತಿಗೆ ಹೊಸ ಅರ್ಥ ಸಿಗುತ್ತಿದೆ. ಈ ಜೋಡಿ ಮದುವೆಗೆ ಎಲ್ಲರೂ ಕಾಯುತ್ತಿದ್ದಾರೆ.
Updated on:Feb 03, 2023 | 9:51 AM

ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ಅವರು ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ ಪ್ಯಾಲೇಸ್ನಲ್ಲಿ ಫೆ.6ಕ್ಕೆ ಮದುವೆ ಆಗಲಿದ್ದಾರೆ. ಈಗಾಗಲೇ ಈ ಪ್ಯಾಲೆಸ್ನಲ್ಲಿ ಮದುವೆಯ ಸಿದ್ಧತೆ ನಡೆದಿದೆ.

ಕಿಯಾರಾ ಹಾಗೂ ಸಿದ್ದಾರ್ಥ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈಗ ಇವರ ಪ್ರೀತಿಗೆ ಹೊಸ ಅರ್ಥ ಸಿಗುತ್ತಿದೆ. ಈ ಜೋಡಿ ಮದುವೆಗೆ ಎಲ್ಲರೂ ಕಾಯುತ್ತಿದ್ದಾರೆ.

ಬಾಲಿವುಡ್ನ ಅನೇಕ ಸೆಲೆಬ್ರೆಟಿಗಳು ಈ ಮದುವೆಗೆ ಹಾಜರಿ ಹಾಕುವ ನಿರೀಕ್ಷೆ ಇದೆ. ಬಹಳ ಅದ್ದೂರಿಯಾಗಿ ಈ ವಿವಾಹ ಕಾರ್ಯಗಳು ನಡೆಯುತ್ತಿವೆ.

ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆ ಆಗುತ್ತಿರುವ ಸೂರ್ಯಗಢ ಪ್ಯಾಲೇಸ್ನ ಫೋಟೋಗಳು ವೈರಲ್ ಆಗಿವೆ. ಒಂದು ವಾರಗಳ ಕಾಲ ಇದನ್ನು ಬುಕ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆಯಲ್ಲಿ ಕರಣ್ ಜೋಹರ್, ರೋಹಿತ್ ಶೆಟ್ಟಿ ಮೊದಲಾದವರು ಭಾಗಿ ಆಗುತ್ತಿದ್ದಾರೆ.

ಮದುವೆ ತಯಾರಿಗಳು ನಡೆಯುತ್ತಿವೆ. ಸಿದ್ದಾರ್ಥ್ ಹಾಗೂ ಕಿಯಾರಾ ಶಾಪಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಫೋಟೋಗ್ರಾಫರ್ಗಳು ಮದುವೆ ನಡೆಯುವ ಸ್ಥಳಕ್ಕೆ ತೆರಳಿದ್ದಾರೆ.
Published On - 9:12 am, Fri, 3 February 23




