Rishika Sharma Nihal Marriage: ‘ವಿಜಯಾನಂದ’ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಜೊತೆ ಹೀರೋ ನಿಹಾಲ್​ ಮದುವೆ

Rishika Sharma | Nihal: ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ನಿಹಾಲ್​ ಮತ್ತು ರಿಷಿಕಾ ಶರ್ಮಾ ಅವರು ಸಿಹಿ ಸುದ್ದಿ ನೀಡಿದ್ದಾರೆ. ಹಸೆಮಣೆ ಏರಲು ಈ ಸೆಲೆಬ್ರಿಟಿ ಜೋಡಿ ಸಜ್ಜಾಗಿದೆ.

ಮದನ್​ ಕುಮಾರ್​
|

Updated on:Feb 02, 2023 | 10:27 PM

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಿಹಾಲ್​ ​ ಹಾಗೂ ನಿರ್ದೇಶಕಿ ರಿಷಿಕಾ ಶರ್ಮಾ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಈ ಜೋಡಿಯ ಮದುವೆ ನೆರವೇರಲಿದೆ.

1 / 5
ನಿಹಾಲ್​ ಮತ್ತು ರಿಷಿಕಾ ಶರ್ಮಾ ಅವರು ಗುಡ್​ ನ್ಯೂಸ್​ ನೀಡಿದ್ದಾರೆ. ‘ವಿಜಯಾನಂದ’ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು. ಈಗ ಪತಿ-ಪತ್ನಿ ಆಗುತ್ತಿದ್ದಾರೆ. ಫೆಬ್ರವರಿ 15ರಂದು ಮದುವೆ ಆಗುತ್ತಿರುವುದಾಗಿ ಈ ಜೋಡಿ ತಿಳಿಸಿದೆ.

2 / 5
ಕಳೆದ 9 ವರ್ಷಗಳಿಂದಲೂ ನಿಹಾಲ್​ ಮತ್ತು ರಿಷಿಕಾ ಶರ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಇಬ್ಬರ ಪ್ರೀತಿಗೆ ಮದುವೆ ಮುದ್ರೆ ಬೀಳುತ್ತಿದೆ. ಇಬ್ಬರಿಗೂ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು, ಆಪ್ತರು ಹಾಗೂ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

3 / 5
ಫೆಬ್ರವರಿ 15ರಂದು ಬೆಂಗಳೂರಿನ ಮಲ್ಲೇಶ್ವರದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ನಿಹಾಲ್​ ಮತ್ತು ರಿಷಿಕಾ ಶರ್ಮಾ ಅವರು ಸಪ್ತಪದಿ ತುಳಿಯಲಿದ್ದಾರೆ. ಈ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವರು ಸಾಕ್ಷಿ ಆಗಲಿದ್ದಾರೆ.

4 / 5
ಮದುವೆ ಬಳಿಕ, ಅಂದರೆ ಫೆಬ್ರವರಿ 17ರಂದು ಮಧ್ಯಾಹ್ನ 12 ಗಂಟೆ ನಂತರ ಧಾರವಾಡದ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ರಿಸೆಪ್ಷನ್ ನಡೆಸಲಾಗುವುದು.​ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ನಿಹಾಲ್​ ಮತ್ತು ರಿಷಿಕಾ ಶರ್ಮಾ ಅವರು ಸಿಹಿ ಸುದ್ದಿ ನೀಡಿದ್ದಾರೆ.

5 / 5

Published On - 10:27 pm, Thu, 2 February 23

Follow us