Updated on:Aug 15, 2021 | 4:37 PM
Know about tea side effect of health check in kannada
ಅನೇಕ ಜನರು ಹಸಿವಾದಾಗ ಖಾಲಿ ಹೊಟ್ಟೆಯಲ್ಲಿ ಚಹ ಸೇವಿಸುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಖಾಲಿ ಹೊಟ್ಟೆಯಲ್ಲಿ ಚಹ ಸೇವಿಸುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಏಕೆಂದರೆ ಚಹಾದಲ್ಲಿನ ಕೆಫೀನ್ ದೇಹದಲ್ಲಿ ಬಹಳ ಬೇಗ ಕರಗುತ್ತದೆ. ಇದರ ಪರಿಣಾಮ ರಕ್ತದೊತ್ತಡ ಕೂಡ ವೇಗವಾಗಿ ಪರಿಣಾಮ ಬೀರುತ್ತದೆ. ಚಹಾದ ಅತಿಯಾದ ಸೇವನೆಯು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸಂಧಿವಾತದಂತಹ ಸಮಸ್ಯೆಗಳು ಹೆಚ್ಚಾಗಿವೆ. ಅತಿಯಾದ ಚಹಾ ಸೇವನೆಯು ಮೂಳೆಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಕೀಲು ನೋವಿನ ಸಮಸ್ಯೆ ಕಾಡ ತೊಡಗುತ್ತದೆ.
Published On - 4:34 pm, Sun, 15 August 21