ವರ್ಷಕ್ಕೊಮ್ಮೆ ಕೋಲಾರದಲ್ಲಿ ಸೃಷ್ಟಿಯಾಗುವ ಮಂಜಿನ ಲೋಕ ಹೇಗಿರುತ್ತೆ? ಇಲ್ಲಿದೆ ಝಲಕ್

Edited By:

Updated on: Jan 19, 2025 | 4:37 PM

ಕೋಲಾರದಲ್ಲಿ ಈ ವರ್ಷ ಅನುಭವಿಸುತ್ತಿರುವ ಅಸಾಮಾನ್ಯ ದಟ್ಟ ಮಂಜು, ಮಲೆನಾಡಿನ ವಾತಾವರಣವನ್ನು ನೆನಪಿಸುತ್ತದೆ. ಬರಗಾಲದ ನಡುವೆ ಈ ಮಂಜು ಅದ್ಭುತ ದೃಶ್ಯಗಳನ್ನು ಸೃಷ್ಟಿಸಿದ್ದರೂ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಾಹನ ಸಂಚಾರದ ಮೇಲೂ ಇದರ ಪ್ರಭಾವಬೀರಿದೆ. ವರ್ಷಕ್ಕೊಮ್ಮೆ ಈ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ.

1 / 6
ಅದು ಚುಮು ಚುಮು ಚಳಿಯ ಜೊತೆಗೆ ಸುಂದರ ಲೋಕವನ್ನು ಸೃಷ್ಟಿ ಮಾಡಲು ಧರೆಗಿಳಿದು ಬಂದಿದ್ದ ಇಬ್ಬನಿ, ಸದಾ ಬಯಲು ಸೀಮೆಯಲ್ಲಿ ಬರ ಹಾಗೂ ಬಿಸಿಲಿನ ತಾಪಕ್ಕೆ ಬಳಲುವ ಜನರಿಗೆ ಮಲೆನಾಡಿನ ಅನುಭವವನ್ನು ನೀಡುವ ಸಲುವಾಗಿಯೇ ಸೃಷ್ಟಿಯಾಗಿರುವ ಮಂಜಿನಲೋಕ, ಕೋಲಾರದಲ್ಲಿ ವರ್ಷಕ್ಕೊಮ್ಮೆ ಸೃಷ್ಟಿಯಾಗಿರುವ ಮಂಜಿನ ಲೋಕ ಹೇಗಿರುತ್ತೆ ಇಲ್ಲಿದೆ ನೋಡಿ.

2 / 6
ಮಳೆರಾಯನ ಶಾಪಕ್ಕೆ ಸಿಲುಕಿ ಈ ವರ್ಷ ಬರಗಾಲಕ್ಕೆ ತುತ್ತಾಗಿರುವ ಕೋಲಾರದಲ್ಲಿ ಮಳೆ ಇಲ್ಲದೆ ಕೇವಲ ಮಂಜಿನ ಮಳೆ ನೋಡಿ ಖುಷಿ ಪಡುವಂತಾಗಿದೆ. ಈ ವರ್ಷ ಕೋಲಾರದಲ್ಲಿ ಮಳೆಗಿಂತ ಹೆಚ್ಚು ಚಂಡಮಾರುತವೇ ಮಳೆಯಾಗಿತ್ತು. ಬಿಟ್ಟು ಬಿಡದೆ ಸುರಿದ ಮಳೆಯಲ್ಲೇ ಜಿಲ್ಲೆಯ ರೈತರು ಒಂದಷ್ಟು ಬೆಳೆ ಬೆಳೆದಿದ್ದನ್ನು ಬಿಟ್ಟರೆ ಕೋಲಾರಕ್ಕೆ ಈ ವರ್ಷ ಬರಗಾಲವೇ ನಿಜ.

3 / 6
ಈ ನಡುವೆ ಕೋಲಾರದಲ್ಲಿ ನಿತ್ಯ ದಟ್ಟವಾದ ಇಬ್ಬನಿ ಕವಿದಿರುತ್ತದೆ. ಈ ಭಾಗದ ಗಿರಿಶಿಖರಗಳನ್ನ ಆವರಿಸಿ, ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಊಟಿಯ ವಾತಾವರಣದಂಥ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಂತಹ ಇಬ್ಬನಿಯಿಂದ ಆವೃತವಾಗಿರುವ ಇಲ್ಲಿನ ಬೆಟ್ಟಗಳನ್ನ ನೊಡೋದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ. ಬಿಸಿಲಿನ ವಾತಾವರಣ ನೋಡಿ ನೋಡಿ ಸಾಕಾಗಿದ್ದ ಜನರಿಗೆ ಕೋಲಾರದಲ್ಲಿನ ಈ ಮಂಜಿನಾಟ ಮಲೆನಾಡಿನ ಅನುಭವ ನೀಡುತ್ತಿದೆ. 

4 / 6
ಮುಂಗಾರು ಮಳೆ ಹಾಗೂ ಹಿಂಗಾರು ಎರಡು ಮಳೆಗಳು ರೈತರ ನೀರೀಕ್ಷೆಯನ್ನು ಹುಸಿ ಮಾಡಿದ್ದವು. ಈ ನಡುವೆ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸುತ್ತಿದೆ. ಪರಿಣಾಮ ಗಿಡ-ಮರ ಎಲೆಗಳಿಂದ ಇಬ್ಬನಿ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ದಟ್ಟವಾದ ಹಿಮ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿರುತ್ತಿದೆ.

5 / 6
ಕಳೆದ ಹದಿನೈದು ದಿನದಿಂದ ದಿನಬಿಟ್ಟು ದಿನ ಕೋಲಾರ ನಗರ ಸೇರಿದಂತೆ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 8 ಗಂಟೆಯಾದ್ರೂ ದಟ್ಟವಾದ ಹಿಬ್ಬನಿ ನಗರವನ್ನೆಲ್ಲಾ ಆವರಿಸಿರುತ್ತದೆ. ಇನ್ನು ಪಕ್ಕದ ಬೆಟ್ಟದಿಂದ ಕೋಲಾರ ನಗರವನ್ನು ನೋಡಿದರಂತು ಇದೊಂದು ದೇವಲೋಕವೇನೋ ಎನ್ನುವಂತೆ ಭಾಸವಾಗುತ್ತದೆ.

6 / 6
ಇನ್ನು ಇಂಥ ಸುಂದರ ವಾತಾವರಣ ನೋಡಲು ಎಷ್ಟು ಚೆನ್ನವೋ ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಕೆಲವರಿಗಂತು ಈ ವಾತಾವರಣ ನೆಗಡಿ, ಕೆಮ್ಮು, ಹಾಗೂ ಜ್ವರದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ವಿಹಾರಿಗಳು ಕೂಡ ಕೆಲವರು ಇದನ್ನು ಎಂಜಾಯ್​ ಮಾಡಿದರೆ ಇನ್ನು ಕೆಲವರು ಇದರಿಂದ ದೂರವೇ ಉಳಿಯುತ್ತಿದ್ದಾರೆ.  

Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us