
ಬಿಗ್ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ ನಾಯಕಿ, ನಿರ್ಮಾಪಕಿ ಆಗಿರುವ ‘ಕೋಣ’ ಸಿನಿಮಾ ಅ.31ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಅವರು ಹೀರೋ ಆಗಿ ನಟಿಸಿದ್ದಾರೆ.

ಈಗಾಗಲೇ ಟ್ರೇಲರ್ ಮೂಲಕ ‘ಕೋಣ’ ಸಿನಿಮಾ ಗಮನ ಸೆಳೆದಿದೆ. ಈಗ ಈ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. ಡಾರ್ಕ್ ಕಾಮಿಡಿ ಶೈಲಿಯ ಈ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

ಕೀರ್ತಿರಾಜ್, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ರಂಜಿತ್ ಗೌಡ, ಹುಲಿ ಕಾರ್ತಿಕ್, ತುಕಾಲಿ ಸಂತೋಷ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತಾ, ಜಗಪ್ಪ, ಮಂಜು ಪಾವಗಡ ಮುಂತಾದವರು ನಟಿಸಿದ್ದಾರೆ.

‘ಕೋಣ’ ಸಿನಿಮಾಗೆ ಹರಿಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ನಾಗೇಶ್ ಎನ್. ಅವರು ಸಹ ನಿರ್ದೇಶಕರಾಗಿ ಆಗಿ ಕೆಲಸ ಮಾಡಿದ್ದಾರೆ. ನೈಜ ಘಟನೆ ಆಧರಿಸಿ ಈ ಚಿತ್ರ ತಯಾರಾಗಿದೆ.

ಈ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ಉಮೇಶ್ ಆರ್.ಬಿ. ಅವರ ಸಂಕಲನ ಚಿತ್ರಕ್ಕಿದೆ. ವಿನೋದ್ ಕುಮಾರ್ ಸಾಹಸ ನಿರ್ದೇಶನ ಮಾಡಿದ್ದಾರೆ.