- Kannada News Photo gallery Legal advice : How to prove marital physical harassment ? What is the punishment given by Indian law?
ವೈವಾಹಿಕ ಅತ್ಯಾಚಾರಕ್ಕೆ ಭಾರತೀಯ ಕಾನೂನಿನಲ್ಲಿ ಶಿಕ್ಷೆ ಇದೆಯೇ? ಕಾನೂನು ಈ ಬಗ್ಗೆ ಏನು ಹೇಳುತ್ತೆ?
ದಿನಬೆಳಗಾದರೆ ಸಾಕು ಈ ಅತ್ಯಾಚಾರಕ್ಕೆ ಸಂಬಂಧ ಪಟ್ಟ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ವೈವಾಹಿಕ ಜೀವನದಲ್ಲಿ ನಡೆಯುವ ಅತ್ಯಾಚಾರದ ಬಗ್ಗೆ ನಿಮಗೆ ತಿಳಿದಿದೆಯೇ. ಹೌದು, ಮದುವೆಯಾಗಿದ್ದರೂ ಕೂಡ ತನ್ನ ಪತ್ನಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಭೋಗದಲ್ಲಿ ತೊಡಗಿಸಿಕೊಂಡಾಗ ಅದು ವೈವಾಹಿಕ ಆತ್ಯಾಚಾರ ಎನಿಸಿಕೊಳ್ಳುತ್ತದೆಯಂತೆ. ಹಾಗಾದ್ರೆ ವೈವಾಹಿಕ ಅತ್ಯಾಚಾರಕ್ಕೆ ಭಾರತದ ಕಾನೂನಿನಲ್ಲಿ ಶಿಕ್ಷೆ ಇದೆಯೇ? ಪತ್ನಿಯೂ ಇದನ್ನೂ ಸಾಭೀತು ಪಡಿಸುವುದು ಹೇಗೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Apr 21, 2025 | 3:03 PM

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಹೆಣ್ಣು ಮಕ್ಕಳು ಕೆಲವೊಮ್ಮೆ ತಮಗಿಷ್ಟವಿಲ್ಲದಿದ್ದರೂ ಪತಿಯನ್ನು ದೈಹಿಕವಾಗಿ ಖುಷಿ ಪಡಿಸಬೇಕಾಗುತ್ತದೆ. ಎಷ್ಟೋ ಬಾರಿ ಮನೆಯ ಜವಾಬ್ದಾರಿ ಹಾಗೂ ಇನ್ನಿತರ ಕಾರಣಗಳಿಂದ ಈ ಬಗೆಗೆ ನಿರಾಸಕ್ತಿ ತೋರಿಸುತ್ತಾರೆ. ಒಂದು ವೇಳೆ ಪತಿಯಾದವನು ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆಗೆ ಸಂಭೋಗ ನಡೆಸಿದರೆ ಅದು ವೈವಾಹಿಕ ಅತ್ಯಾಚಾರವೆನಿಸಿಕೊಳ್ಳುತ್ತದೆ.

ಮಹಿಳೆಯೂ ತನ್ನ ಪತಿಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಾಗ ಈ ವೈವಾಹಿಕ ಅತ್ಯಾಚಾರಗಳು ನಡೆಯುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇದು ಹೆಣ್ಣಿನ ಮೇಲಿನ ದೈಹಿಕ ಮಾತ್ರವಲ್ಲದೇ, ಮಾನಸಿಕ ಹಾಗೂ ಭಾವಾನಾತ್ಮಕ ದೌರ್ಜನ್ಯ ಎಂದು ಕರೆಯಲಾಗುತ್ತದೆ. ಪತಿಯ ಈ ವರ್ತನೆಯು ಹೆಣ್ಣನ್ನು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ.

ಭಾರತೀಯ ನ್ಯಾಯ ಸಂಹಿತೆ ಎಂದಾಗಿರುವ ಐಪಿಸಿ ಸೆಕ್ಷನ್ 375 ರ ಅಡಿಯಲ್ಲಿ, ಅಪ್ರಾಪ್ತ ವಯಸ್ಕಳಲ್ಲದ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ದೈಹಿಕ ಸಂಪರ್ಕ ನಡೆಸಿದರೆ ಅದು ಅತ್ಯಾಚಾರವಲ್ಲ. ಹೊಸ ಕಾನೂನಿನ ಅಡಿಯಲ್ಲಿಯೂ ಸೆಕ್ಷನ್ 63 ವಿನಾಯಿತಿ 2 (ಅತ್ಯಾಚಾರ) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಪುರುಷನು ಸಂಭೋಗ ನಡೆಸುವುದು ಅತ್ಯಾಚಾರವಲ್ಲ ಎನ್ನಲಾಗಿದೆ.

ಅದಲ್ಲದೇ, ನ್ಯಾಯಾಂಗ ಪ್ರತ್ಯೇಕತೆ ಐಪಿಸಿ ಸೆಕ್ಷನ್ 376 ಬಿ ಆದೇಶದ ಬಳಿಕ ಪತಿ ತನ್ನ ಪತ್ನಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಭೋಗ ನಡೆಸಿದ್ದಲ್ಲಿ ಅಥವಾ ಹೆಂಡತಿ ಅಪ್ರಾಪ್ತ ವಯಸ್ಕಳಾಗಿದ್ದರೆ (18 ವರ್ಷಕ್ಕಿಂತ ಕೆಳಗಿನವರು) ಅದು ವೈವಾಹಿಕ ಅತ್ಯಾಚಾರ ಎಂದೆನೆಸಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ವೈವಾಹಿಕ ಅತ್ಯಾಚಾರವನ್ನು ಸಾಬೀತುಪಡಿಸಲು ಸಾಕ್ಷ್ಯಗಳು ಬಹಳ ಮುಖ್ಯ. ವೈದ್ಯಕೀಯ ವರದಿ, ಮಾನಸಿಕ ಆರೋಗ್ಯ ವರದಿ ಸೇರಿದಂತೆ ವಾಟ್ಸಾಪ್ ಚಾಟ್‌ಗಳು, ಬೆದರಿಕೆ ವಿಡಿಯೋ ಹಾಗೂ ಆಡಿಯೋ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಘೋಷಿಸಿದರೆ ಐಪಿಸಿ ಸೆಕ್ಷನ್ 376 ರ ಪ್ರಕಾರ 7 ವರ್ಷದಿಂದ ಜೀವಾವಧಿಯವರೆಗೆ ಜೈಲು ಶಿಕ್ಷೆ ವಿಧಿಸಬಹುದಗಿದೆ.




