Love Breakup: ಲವ್ ಬ್ರೇಕ್ಅಪ್ಗೆ ಈ ವಿಷಯಗಳು ಕಾರಣವಾಗಿರಬಹುದು?
ಪ್ರೀತಿಯಲ್ಲಿ ಬಂದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಮತ್ತಷ್ಟು ನಿರಕಾರಣೆಗಳು ಉಂಟಾಗುವುದು, ಅದು ಕೊನೆಗೆ ಬ್ರೇಕ್-ಅಪ್ ಹಂತಕ್ಕೆ ಬಂದು ನಿಲ್ಲುತ್ತದೆ.
Updated on: Jul 26, 2022 | 7:13 PM

break-up story

break-up story

ಹಳೆಯ ನೆನಪುಗಳು: ಯಾವುದೊಂದು ಉದ್ದೇಶದಿಂದ ನಿಮ್ಮ ಹಳೆಯ ಪ್ರೀತಿಯ ವಿಚಾರಗಳನ್ನು ತರವುದು ಬ್ರೇಕ್-ಅಪ್ಗೆ ಕಾರಣವಾಗಬಹುದು. ಹೆಳೆಯ ನೆನಪಿನಿಂದ ಸಂಬಂಧಗಳಲ್ಲಿ ಬಿಕ್ಕಟ್ಟು ಹುಟ್ಟಿಕೊಳ್ಳುವುದು ಖಂಡಿತ, ಹಳೆಯ ಪ್ರೀತಿಗಳ ಬಗ್ಗೆ ಯಾವತ್ತೂ ಮಾತನಾಡಬೇಡಿ ಅಥವಾ ನಿಮ್ಮವರ ಹಳೆಯ ಪ್ರೀತಿಯ ಬಗ್ಗೆ ನೆನಪಿಸಬೇಡಿ, ಅದು ಅವರಿಗೆ ಮುಜುಗರ ಮಾಡುವುದು ಖಂಡಿತ.

ನಂಬಿಕೆ ಇರಲಿ: ಪ್ರೀತಿ ಮಾತ್ರವಲ್ಲ ಎಲ್ಲ ವಿಷಯಗಳಲ್ಲೂ ನಂಬಿಕೆ ಎಂಬುದು ಇರಬೇಕು, ಪ್ರೀತಿಯಲ್ಲಿ ನಂಬಿಕೆ ಎನ್ನವುದು ಅತಿ ಮುಖ್ಯವಾಗಿರುತ್ತದೆ, ಅದಕ್ಕೆ ಪ್ರೀತಿಯಲ್ಲಿ ನಂಬಿಕೆ ಇಲ್ಲದಿದ್ದರೆ, ಆ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಪನಂಬಿಕೆಗಳನ್ನು ನಿಮ್ಮ ನಡುವೆ ಬಂದಾಗ ಖಂಡಿತ ಬ್ರೇಕ್-ಅಪ್ ಆಗುವುದು.

ಹೆಚ್ಚು ಸಮಯ ನೀಡಿ: ನಿಮ್ಮ ನಡುವೆ ಬ್ರೇಕ್-ಅಪ್ ಉಂಟಾಗಲು ಸಮಯದ ಕಾರಣವು ಆಗಿರಬಹುದು. ಕೆಲವೊಂದು ಪ್ರೇಮಿಗಳು ಪ್ರೀತಿಯಾದ ನಂತರ ಪ್ರೀತಿ ಮಾಡುವವರಿಗಿಂತ ಸ್ನೇಹಿತರು ಇನ್ನಿತರ ವಿಚಾರಗಳಿಗೆ ಗಮನ ನೀಡುತ್ತಾರೆ, ಇದು ಬ್ರೇಕ್-ಅಪ್ಗೆ ಕಾರಣವಾಗಬಹುದು.

ವೃತ್ತಿ ಜೀವನದ ಒತ್ತಡ: ನಿಮ್ಮ ವೃತ್ತಿ ಜೀವನದ ಒತ್ತಡ ನಿಮ್ಮ ಸಂಬಂಧವನ್ನು ಇನ್ನಷ್ಟು ಕುಗ್ಗಿಸಬಹುದು. ಪ್ರೀತಿ ಮಧ್ಯೆ ವೃತ್ತಿ ಬದುಕು ಬಂದಾಗ ಯಾವುದು ಆಯ್ದುಕೊಳ್ಳವುದು ಎಂಬ ಗೊಂದಲ ಇರುತ್ತದೆ. ಪ್ರತಿಕ್ಷಣವು ಪ್ರೀತಿಸಿದವರ ಜೊತೆಗೆ ಇರಬೇಕು ಎಂದರೆ ವೃತ್ತಿಗೆ ಗಮನ ನೀಡಲು ಸಾಧ್ಯವಿಲ್ಲ, ಪ್ರೀತಿಯ ಜೊತೆಗೆ ವೃತ್ತಿಯು ಬೇಕು ಹಾಗಾಗಿ ಪ್ರೀತಿ ಜೊತೆಗೆ ವೃತ್ತಿಯ ಗಮನವು ಅಗತ್ಯವಾಗಿರುತ್ತದೆ.

ಲೈಂಗಿಕ ಸಂತೋಷ: ಹೌದು ದೇಹ ಸಂಪರ್ಕದ ನಂತರ ಪ್ರೀತಿಯಲ್ಲಿ ಅಷ್ಟೊಂದು ಆಸಕ್ತಿ ಇರಲ್ಲ, ಇದು ಬ್ರೇಕ್-ಅಪ್ಗೆ ಕಾರಣವಾಗುವುದು, ಆದರೆ ಇದನ್ನು ಮಾಡುವ ಮುನ್ನ ತಮ್ಮ ಬಗ್ಗೆ ಎಚ್ಚರಿಕೆ ಇರಲಿ. ಲೈಂಗಿಕ ಸಂಪರ್ಕಕ್ಕಿಂತ ಪ್ರೀತಿ ಹೆಚ್ಚು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ.




