ಬಂದೂಕು ಸಮೇತ ಮೆರವಣಿಗೆ ನಡೆಸಿದ ಸಾಂಪ್ರದಾಯಿಕ ಉಡುಗೆತೊಟ್ಟ ಜನರು ಮೈದಾನದಲ್ಲಿ ಜಮಾಯಿಸಿ ಬಂದೂಕು ತಮ್ಮ ಹಕ್ಕು ಎಂಬುದನ್ನ ಸಾರಿದ್ರು. ಇದಾದ ಬಳಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವರು ತಮ್ಮ ತಮ್ಮ ಕೋವಿಗಳೊಂದಿಗೆ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು. ನಾವು ಹಲವು ಬಗೆಯ ಉತ್ಸವಗಳನ್ನ ನೋಡಿರ್ತೀವಿ, ಆದರೆ ಕೊಡಗಿನಲ್ಲಿ ನಡೆಯುವ ಕೋವಿ ಉತ್ಸವ ನಿಜಕ್ಕೂ ವಿಶೇಷ. ಕೋವಿ ಬಳಸೋದು ಪ್ರಾಣ ರಕ್ಷಣೆಗಾಗಿ ಅಲ್ಲ ಬದಲಾಗಿ ಕೋವಿಗೆ ಕೊಡವರಲ್ಲಿ ಪೂಜ್ಯಭಾವನೆ ಇದೆ ಅನ್ನೋದನ್ನ ಸಾರೋದಲ್ಲಿ ಈ ಹಬ್ಬ ಸಕ್ಸಸ್ ಆಯಿತು. ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ 9, ಕೊಡಗು