
ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ಅವರು ಸದ್ಯ ಬೇಸಿಗೆ ರಜಾ ಕಳೆಯುತ್ತಿದ್ದಾರೆ. ಪರೀಕ್ಷೆಗಳು ಪೂರ್ಣಗೊಂಡಿದ್ದು, ತಂದೆ ಜೊತೆ ಅವರು ವಿದೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಮಹೇಶ್ ಬಾಬು ಮಗಳು ಸಿತಾರಾ ರೋಮ್ ನಗರದಲ್ಲಿ ಸುತ್ತಾಟ ನಡೆಸುತ್ತಾ ಇದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ‘ರೋಮ್ ಐ ಲವ್ ಯೂ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ರೋಮ್ ನಗರ ಅವರಿಗೆ ತುಂಬಾನೇ ಇಷ್ಟ ಆಗಿದೆ.

ಸಿತಾರಾ ಅವರು ಒಂದು ಬ್ರ್ಯಾಂಡ್ ಆಗಿ ಪರಿವರ್ತನೆ ಗೊಂಡಿದ್ದಾರೆ. ಅವರು ಅನೇಕ ಬ್ರ್ಯಾಂಡ್ಗಳ ಪ್ರಚಾರದಲ್ಲಿ ಭಾಗಿ ಆಗುತ್ತಾ ಇದ್ದಾರೆ. ಇದರಿಂದ ಅವರಿಗೆ ಹಣ ಬರುತ್ತಿದ್ದು, ಅದನ್ನು ಸಾಮಾಜಿಕ ಕೆಲಸಗಳಿಗೆ ಅವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.

ಮಹೇಶ್ ಬಾಬು ಅವರು ಇತ್ತೀಚೆಗೆ ‘SSMB29’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬ್ರೇಕ್ ಪಡೆದು ರೋಮ್ ತೆರಳಿದ್ದಾರೆ. ಮಕ್ಕಳಿಗೆ ರಜೆ ಇರುವ ಕಾರಣದಿಂದ ಅವರು ರೋಮ್ಗೆ ಪ್ರಯಾಣ ಬೆಳೆಸಿದ್ದಾರೆ. ಸಿತಾರಾ ಕೂಡ ಮಹೇಶ್ ಬಾಬು ಜೊತೆಗಿದ್ದಾರೆ.

ಸಿತಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೇವಲ 12ನೇ ವಯಸ್ಸಿಗೆ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 2 ಮಿಲಿಯನ್ ಅಂದರೆ 20 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಸದ್ಯ ಶಿಕ್ಷಣದ ಬಗ್ಗೆ ಗಮನ ಹರಿಸುತ್ತಿದ್ದು, ಆ ಬಳಿಕ ನಟನೆಗೆ ಬರಲಿದ್ದಾರೆ.