- Kannada News Photo gallery Mantralaya Raghavendra Swamy Aradhane Scuptures in Corridor Attracting Devotees
Mantralayam Photos: ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಆರಾಧನಾ ವೈಭವ
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಜನಸಾಗರ ಹರಿದು ಬಂದಿದೆ. ಮಠದ ಮೊಗಸಾಲೆಯನ್ನು (ಕಾರಿಡಾರ್) ಅದ್ಧೂರಿಯಾಗಿ ಸಿಂಗರಿಸಲಾಗಿದ್ದು, ಕಣ್ಣಿಗೆ ಹಬ್ಬ ಕೊಡುವ ದೃಶ್ಯಗಳು ಎಲ್ಲೆಲ್ಲಿಯೂ ಕಂಡುಬರುತ್ತಿವೆ. ಈ ಬಾರಿ ರಾಯರ 351ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಮಠದ ಮೊಗಸಾಲೆಯನ್ನು ಹಲವು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಿಸಲಾಗಿದೆ. ‘ಮಧ್ವ ಮಾರ್ಗ’ ಹೆಸರಿನ ಈ ಕಾರಿಡಾರ್ನಲ್ಲಿ ತಮಿಳುನಾಡಿನ ಉಬ್ಬುಶಿಲ್ಪ ಶೈಲಿಯ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
Updated on:Aug 11, 2022 | 12:52 PM

Mantralaya Raghavendra Swamy Aradhane

Mantralaya Raghavendra Swamy Aradhane Scuptures in Corridor Attracting

ಆರಾಧನೆ ಪ್ರಯುಕ್ತ ಭಕ್ತರು ಶ್ರೀಮಠಕ್ಕೆ ಪಡಿ ಅರ್ಪಿಸಿದರು.

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ ಭಕ್ತರು ಅರ್ಪಿಸಿದ ಪಡಿಯನ್ನು ಪೀಠಾಧೀಶ ವಿಬುಧೇಂದ್ರ ಸ್ವಾಮೀಜಿ ಸ್ವೀಕರಿಸಿದರು.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಜನಸಾಗರ ಹರಿದು ಬಂದಿದೆ. ರಾಮಾಯಣ, ಮಹಾಭಾರತ, ರಾಘವೇಂದ್ರ ಸ್ವಾಮಿಗಳ ಚರಿತ್ರೆ, ಭಾಗವತ ಕಥೆಗಳನ್ನು ಬಿಂಬಿಸುವ ಶಿಲ್ಪಗಳನ್ನು ಈ ಮಾರ್ಗದಲ್ಲಿ ಅಳವಡಿಸಿರುವ ಮಠದ ಮೊಗಸಾಲೆ ಎಲ್ಲರ ಗಮನ ಸೆಳೆಯುತ್ತಿದೆ.

ತಿರುವನಂತಪುರಂನ ಮೂರು ದ್ವಾರಗಳಂತೆ, ಮಂತ್ರಾಲಯದಲ್ಲೂ ಕಮಾನು ದ್ವಾರಗಳನ್ನು ನಿರ್ಮಿಸಲಾಗಿದೆ. ಮುಖ ಮಂಟಪವನ್ನು ಎರಡು ಅಂತಸ್ತಿನಿಂದ, ಮೂರು ಅಂತಸ್ತಿಗೆ ಮಾರ್ಪಾಡಿಸಲಾಗಿದೆ.

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಮೊಗಸಾಲೆಯ ಉಬ್ಬುಶಿಲ್ಪಗಳು ಎಲ್ಲರ ಗಮನ ಸೆಳೆಯುತ್ತಿವೆ. ವಿವಿಧ ಬಣ್ಣಗಳ ವಿದ್ಯುತ್ ದೀಪಗಳು, ಹೂವಿನ ಅಲಂಕಾರ, ಬೆಳ್ಳಿ ಮತ್ತು ಬಂಗಾರದ ರಥಗಳು ಎಲ್ಲರ ಗಮನ ಸೆಳೆಯುತ್ತಿವೆ.

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಆರಾಧನೆ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರ ಬೃಂದಾವನಕ್ಕೆ ನಮಿಸಿದರು.
Published On - 12:47 pm, Thu, 11 August 22




