
ಮೇಘನಾ ರಾಜ್-ಚಿರಂಜೀವಿ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ. ಈ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಾರೆ.

ರಾಯನ್ ರಾಜ್ ಸರ್ಜಾ ಆಗಮನದ ಬಳಿಕ ಮೇಘನಾ ರಾಜ್ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ. ಪುತ್ರನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆಗಾಗ ಅವರು ಮಗನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಗೆಳೆಯನ ಬರ್ತ್ಡೇ ಪಾರ್ಟಿಯಲ್ಲಿ ರಾಯನ್ ರಾಜ್ ಸರ್ಜಾ ಭಾಗವಹಿಸಿದ್ದಾನೆ. ಫ್ರೆಂಡ್ಸ್ ಜತೆ ಸೇರಿ ಆಟ ಆಡಿದ್ದಾನೆ. ಈ ಸಂದರ್ಭದಲ್ಲಿ ಮೇಘನಾ ರಾಜ್ ಅವರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.

‘ಮಕ್ಕಳನ್ನು ಪೋಸ್ ನೀಡುವಂತೆ ಮಾಡುವುದು ತುಂಬ ಇಷ್ಟ. ಈ ಮಾತನ್ನು ತಾಯಂದಿರೆಲ್ಲ ಒಪ್ಪುತ್ತೀರಾ’ ಎಂದು ಈ ಫೋಟೋಗಳಿಗೆ ಮೇಘನಾ ರಾಜ್ ಕ್ಯಾಪ್ಷನ್ ನೀಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋಗಳಿಗೆ ಲೈಕ್ ಬಟನ್ ಒತ್ತಿದ್ದಾರೆ. ರಾಯನ್ ರಾಜ್ ಸರ್ಜಾ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದಾನೆ.
Published On - 9:37 am, Mon, 13 December 21