AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Junior Asia Cup Hockey 2023: ಪಾಕ್ ಮುಂದೆ ಭಾರತವೇ ಬಲಿಷ್ಠ; ಇಂದು ಬದ್ಧವೈರಿಗಳ ನಡುವೆ ಫೈನಲ್ ಕಾಳಗ!

Junior Asia Cup Hockey 2023: ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಪೃಥ್ವಿಶಂಕರ
|

Updated on:Jun 01, 2023 | 1:32 PM

Share
ಒಮಾನ್‌ನ ಸಲಾಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ನಡೆಯಲಿರುವ ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.  ಈ ಬದ್ಧ ವೈರಿಗಳ ಕಾಳಗ ರಾತ್ರಿ 9:30ಕ್ಕೆ ಪ್ರಾರಂಭವಾಗಲಿದೆ ಮತ್ತು ಭಾರತದಲ್ಲಿ ನೇರ ಪ್ರಸಾರವಾಗಲಿದೆ.

1 / 7
ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅಜೇಯರಾಗಿ ಫೈನಲ್​ಗೆ ಎಂಟ್ರಿಕೊಟ್ಟಿವೆ. ಈ ಮೊದಲು ಲೀಗ್ ಹಂತಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯ 1-1 ರಲ್ಲಿ ಡ್ರಾಗೊಂಡಿತ್ತು. ಆದಾಗ್ಯೂ, ಭಾರತ ತಂಡ, ಪಾಕ್ ತಂಡಕ್ಕಿಂತ ಹೆಚ್ಚಿನ ಗೋಲು ಬಾರಿಸಿರುವುದರಿಂದಾಗಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

2 / 7
ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಚೈನೀಸ್ ತೈಪೆ ವಿರುದ್ಧ 18-0 ಮತ್ತು ಜಪಾನ್ ವಿರುದ್ಧ 3-1 ಅಂತರದ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಆ ಬಳಿಕ ಭಾರತ ತನ್ನ ಅಂತಿಮ ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್‌ ಅನ್ನು 17-0 ಅಂತರದಿಂದ ಸೋಲಿಸಿತು.  ನಂತರ ಸೆಮಿಫೈನಲ್‌ನಲ್ಲಿ ಕೊರಿಯಾ ತಂಡವನ್ನು 9-1 ಗೋಲುಗಳಿಂದ ಮಣಿಸಿದ ಭಾರತ ಇದೀಗ ಫೈನಲ್​ಗೆ ಎಂಟ್ರಿಕೊಟ್ಟಿದೆ.

3 / 7
ಏತನ್ಮಧ್ಯೆ, ಪಾಕಿಸ್ತಾನ ಹಾಕಿ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ 15-1 ರಿಂದ ಚೈನೀಸ್ ತೈಪೆಯನ್ನು ಸೋಲಿಸಿತ್ತು. ನಂತರದ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 9-0 ಅಂತರದಿಂದ ಸೋಲಿಸಿದರೆ, ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತ್ತು. ಬಳಿಕ ಸೆಮಿಸ್‌ನಲ್ಲಿ ಮಲೇಷ್ಯಾವನ್ನು 6-2 ಗೋಲುಗಳಿಂದ ಸೋಲಿಸಿದ ಪಾಕ್, ಇದೀಗ ಭಾರತದ ವಿರುದ್ಧ ಫೈನಲ್​ನಲ್ಲಿ ಕಾದಾಡಲಿದೆ.

4 / 7
ಪ್ರಸ್ತುತ ಒಂಬತ್ತು ಗೋಲುಗಳೊಂದಿಗೆ ಟೂರ್ನಮೆಂಟ್‌ನ ಜಂಟಿ ಅಗ್ರ ಸ್ಕೋರರ್ ಆಗಿರುವ ಪಾಕಿಸ್ತಾನದ ಅಬ್ದುಲ್ ರೆಹಮಾನ್ ಮತ್ತು ಏಳು ಸ್ಟ್ರೈಕ್‌ಗಳನ್ನು ಹೊಂದಿರುವ ಭಾರತದ ಆಕ್ರಮಣಕಾರಿ ಆಟಗಾರ ಅರಿಜೀತ್ ಸಿಂಗ್ ಹುಂಡಾಲ್ ನಡುವಿನ ಯುದ್ಧಕ್ಕೆ ಫೈನಲ್ ವೇದಿಕೆ ಸಜ್ಜಾಗಿದೆ.

5 / 7
ಭಾರತ ಮತ್ತು ಪಾಕಿಸ್ತಾನ ಈ ಹಿಂದೆ ಮೂರು ಬಾರಿ ಜೂನಿಯರ್ ಏಷ್ಯಾಕಪ್ ಹಾಕಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. 1996ರ ಫೈನಲ್‌ನಲ್ಲಿ ಪಾಕಿಸ್ತಾನ ಗೆದ್ದರೆ, 2004ರಲ್ಲಿ ಭಾರತ ಜಯಭೇರಿ ಬಾರಿಸಿತ್ತು.

6 / 7
2015 ರಲ್ಲಿ ಮಲೇಷ್ಯಾದಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಭಾರತವು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

7 / 7

Published On - 1:29 pm, Thu, 1 June 23

pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​