Mouni Roy: ಪಡ್ಡೆ ಹುಡುಗರ ನಿದ್ದೆಗೆಡಿಸುವ ಮೌನಿ ರಾಯ್ ಮಾದಕ ಚಿತ್ರಗಳು ಇಲ್ಲಿವೆ
Mouni Roy Photos: ಕೆಜಿಎಫ್ 1 ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಮೌನಿ ರಾಯ್, ಕನ್ನಡದ ಸಿನಿಮಾ ಪ್ರೇಮಿಗಳಿಗೆ ಪರಿಚಯವಿರುತ್ತಾರೆ. ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯಲ್ಲಿ ಬ್ಯುಸಿಯಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಚಿತ್ರಗಳು ಇಲ್ಲಿವೆ.
Updated on:Oct 20, 2021 | 11:49 AM

ಮೌನಿ ರಾಯ್ ಕೇವಲ ಬಾಲಿವುಡ್ ನಟಿ ಮಾತ್ರವಲ್ಲ. ಹಾಡುಗಾರ್ತಿ, ಕಥಕ್ ಡಾನ್ಸರ್ ಕೂಡ ಹೌದು.

ನಟನೆಯಲ್ಲಿ ಸಕ್ರಿಯರಾಗಿರುವುದರ ಜೊತೆಜೊತೆಗೆ ಮಾಡೆಲಿಂಗ್ನಲ್ಲೂ ಮೌನಿ ಗುರುತಿಸಿಕೊಂಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮುಖಾಂತರ ಮಾದಕ ಚಿತ್ರಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

ಪಶ್ಚಿಮ ಬಂಗಾಳ ಮೂಲದ ಮೌನಿ ರಾಯ್ಗೆ ಬಹುದೊಡ್ಡ ಯಶಸ್ಸು ತಂದುಕೊಟ್ಟಿದ್ದು, ನಾಗಿಣಿ 1 ಹಾಗೂ ನಾಗಿಣಿ 2 ಧಾರವಾಹಿಗಳು.

‘ನಾಗಿಣಿ’ಯ ಯಶಸ್ಸಿನ ನಂತರ ಅವರಿಗೆ ಬಾಲಿವುಡ್ನ ಹೆಬ್ಬಾಗಿಲು ತೆರೆಯಿತು. ಸದ್ಯ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ.

2007ರಲ್ಲಿ ‘ಕೃಷ್ಣ ತುಳಸಿ’ ಪಾತ್ರದ ಮುಖಾಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೌನಿ, 2018ರಲ್ಲಿ ‘ಗೋಲ್ಡ್’ ಚಿತ್ರದ ಮುಖಾಂತರ ನಾಯಕಿಯಾಗಿ ಬಾಲಿವುಡ್ಗೆ ಕಾಲಿಟ್ಟರು.

ಕೆಜಿಎಫ್ ಚಿತ್ರದ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ಮೌನಿ ರಾಯ್ ನಂತರ ಬಹುಬೇಡಿಕೆಯ ತಾರೆಯಾದರು.

ಮೌನಿ ‘ಲಂಡನ್ ಕಾನ್ಫಿಡೆನ್ಷಿಯಲ್’ ಎಂಬ ಒಟಿಟಿಯಲ್ಲಿ ಬಿಡುಗಡೆಯಾದ ಚಿತ್ರದಲ್ಲೂ ನಟಿಸಿದ್ದಾರೆ.

ಇದೀಗ ಮೌನಿ ಅವರು ಕಾಣಿಸಿಕೊಂಡಿರುವ ‘ಬ್ರಹ್ಮಾಸ್ತ್ರ’ ಚಿತ್ರದ ಕೆಲಸಗಗಳು ನಡೆಯುತ್ತಿವೆ.

ನಟನೆಯಲ್ಲಲ್ಲದೇ ಹಲವಾರು ಮ್ಯೂಸಿಕ್ ಆಲ್ಬಂಗಳಲ್ಲೂ ಮೌನಿ ಕಾಣಿಸಿಕೊಂಡಿದ್ದಾರೆ.

ಮೌನಿಗೆ ಕಿರುತೆರೆ ಹಾಗೂ ಹಿರಿತೆರೆಯ ಹಲವಾರು ಪ್ರಶಸ್ತಿಗಳೂ ಸಂದಿವೆ.
Published On - 11:48 am, Wed, 20 October 21




