- Kannada News Photo gallery Mysore: today cars race in Mysore: People watched the race in the weekend
ಮೈಸೂರಿನಲ್ಲಿ ರೇಸ್ ಕಾರುಗಳ ಹವಾ: ವೀಕೆಂಡ್ನಲ್ಲಿ ರೇಸ್ ಕಣ್ತುಂಬಿಕೊಂಡ ಜನ
ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಇಂದು ಫಾಸ್ಟ್ ಕಾರ್ ರೇಸ್ ಆಯೋಜಿಸಲಾಗಿತ್ತು. 2017 ರಿಂದ ಮೈಸೂರು ಗ್ರಾವೆಲ್ ಫೆಸ್ಟ್ ಕಾರು ರೇಸ್ ಆಯೋಜನೆ ಮಾಡ್ತಿದ್ದು, ಕೋವಿಡ್ ಬಳಿಕ ಈ ವರ್ಷ ಮತ್ತೆ ಕಾರು ರೇಸ್ ಆಯೋಜಿಸಲಾಗಿದೆ. ಎರಡು ಟ್ರಾಕ್ನಲ್ಲಿ ಕಾರು ರೇಸ್ ನಲ್ಲಿ ಭಾಗವಹಿಸಿದ್ದ ಚಾಲಕರು ಮೈದಾನದಲ್ಲಿ ತಮ್ಮ ಚಮತ್ಕಾರ ತೋರಿದ್ದಾರೆ.
Updated on: Dec 04, 2023 | 9:41 PM

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಇಂದು ಫಾಸ್ಟ್ ಕಾರ್ ರೇಸ್ ಆಯೋಜಿಸಲಾಗಿತ್ತು. 2017 ರಿಂದ ಮೈಸೂರು ಗ್ರಾವೆಲ್ ಫೆಸ್ಟ್ ಕಾರು ರೇಸ್ ಆಯೋಜನೆ ಮಾಡುತ್ತಿದ್ದು, ರೇಸ್ನಲ್ಲಿ ಭಾಗವಹಿಸಿದ್ದ ಕಾರು ಚಾಲಕರು ಮೈದಾನದಲ್ಲಿ ತಮ್ಮ ಚಮತ್ಕಾರ ತೋರಿಸಿದ್ದಾರೆ.

ವೀಕೆಂಡ್ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೇಸ್ ಕಾರುಗಳ ಹವಾ ಜೋರಾಗಿತ್ತು. ಧೂಳೆಬ್ಬಿಸುತ್ತ ಶರವೇಗದಲ್ಲಿ ನುಗ್ಗುತ್ತಿದ್ದ ಕಾರುಗಳು ನೋಡುಗರ ಎದೆ ನಡುಗಿಸಿದ್ದವು. ಟ್ರ್ಯಾಕ್ನಲ್ಲಿ ಬುಲೆಟ್ನಂತೆ ಸಾಗುತ್ತಿದ್ದ ಕಾರುಗಳು ರೇಸ್ ಪ್ರೀಯರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದವು.

ಕಾರು ರೇಸ್ನಲ್ಲಿ 160 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 84 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. 1100,1400,1650 ಸಿಸಿ ಸೇರಿದಂತೆ ಸುಮಾರು 8 ವಿಭಾಗಗಳು, ಮೈಸೂರು ನಾವಿಸ್ ಕ್ಲಾಸ್, ಇಂಡಿಯನ್ ನ್ಯಾಷನಲ್ ಕ್ಲಾಸ್ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಸ್ಪರ್ಧೆಯಲ್ಲಿ ಟಾಪ್ ಫಾಸ್ಟ್ 10 ಡ್ರೈವರ್ಗಳನ್ನು ಆಯ್ಕೆ ಮಾಡಿ ಬಳಿಕ ಸ್ಪರ್ಧೆಯಲ್ಲಿ ಗೆದ್ದ ಒಬ್ಬರಿಗೆ 2 ಲಕ್ಷ ರೂ. ನಗದು ಬಹುಮಾನ ವಿತರಣೆ ಮಾಡಲಾಯಿತು.

ದುಬೈ, ಲಡಾಕ್, ಡೆಲ್ಲಿ, ಮುಂಬೈ, ಪೂನಾ, ಕೊಚ್ಚಿ ಸೇರಿದಂತೆ ವಿವಿಧ ಕಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ರೋಚಕ ರೇಸ್ ನೋಡುಗರ ಮೈ ನವಿರೇಳಿಸಿತು. ಸಾಂಸ್ಕೃತಿಕ ನಗರಿ ಜನರು ಕಾರು ರೇಸ್ ಕಣ್ತುಂಬಿಕೊಂಡು ಖುಷಿಪಟ್ಟರು.



















