AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ಗೊತ್ತಾ ಪಿಂಕ್​​ ಲೈನ್​​ನ ಚಾಲಕ ರಹಿತ ಮೊದಲ ಮೆಟ್ರೋ ರೈಲು?: ಇಲ್ಲಿವೆ ಚಿತ್ರಗಳು

ನಮ್ಮ ಮೆಟ್ರೋದ ಪಿಂಕ್ ಲೈನ್​​ಗಾಗಿ ಬಿಇಎಂಎಲ್ ಸಂಸ್ಥೆಯು ಮೊದಲ ಚಾಲಕರಹಿತ ರೈಲನ್ನು ಬಿಡುಗಡೆ ಮಾಡಿದೆ. ಈ ರೈಲು ಡಿಸೆಂಬರ್ 15 ಅಥವಾ 16ಕ್ಕೆ ಕೊತ್ತನೂರು ಡಿಪೋ ತಲುಪಲಿದೆ. ಒಟ್ಟು 23 ಚಾಲಕರಹಿತ ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

Kiran Surya
| Updated By: ಪ್ರಸನ್ನ ಹೆಗಡೆ|

Updated on: Dec 11, 2025 | 7:51 PM

Share
ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್​​ ಲೈನ್​​ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ಮೊದಲ ರೈಲನ್ನು ಬಿಇಎಂಎಲ್ ಬಿಡುಗಡೆ ಮಾಡಿದೆ. ಡಿಸೆಂಬರ್ 15 ಅಥವಾ 16ಕ್ಕೆ ಬಿಎಂಆರ್ಸಿಎಲ್​​ನ ಕೊತ್ತನೂರು ಡಿಪೋವನ್ನು ಹೊಸ ರೈಲು ತಲುಪಲಿದೆ.

ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್​​ ಲೈನ್​​ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ಮೊದಲ ರೈಲನ್ನು ಬಿಇಎಂಎಲ್ ಬಿಡುಗಡೆ ಮಾಡಿದೆ. ಡಿಸೆಂಬರ್ 15 ಅಥವಾ 16ಕ್ಕೆ ಬಿಎಂಆರ್ಸಿಎಲ್​​ನನ ಕೊತ್ತನೂರು ಡಿಪೋವನ್ನು ಹೊಸ ರೈಲು ತಲುಪಲಿದೆ.

1 / 5
ಮೊದಲ ಹಂತದಲ್ಲಿ ಪಿಂಕ್ ಲೈನ್​​ಗೆ ಚಾಲಕ ರಹಿತ 6 ರೈಲುಗಳು ಬರಲಿದ್ದು, ಆ ಪೈಕಿ ಮೊದಲ ಪ್ರೋಟೋಟೈಪ್ ರೈಲನ್ನ ರೋಲ್ ಔಟ್ ಮಾಡಲಾಗಿದೆ. BMRCL ಎಂಡಿ  ಡಾ. ಜೆ. ರವಿಶಂಕರ್ ಅವರ ನೇತೃತ್ವದಲ್ಲಿ ಈ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, BEML ಸಿಎಂಡಿ ಶಾಂತನು ರಾಯ್ ಸೇರಿ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

2 / 5
ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್​​ ಮತ್ತು ಪಿಂಕ್​​ ಲೈನ್​​ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ. ಮೆಟ್ರೋ ಟ್ರೇನ್‌ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ BEMLನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಜಿನಿಯರಿಂಗ್​​ ಮತ್ತು ನಿರ್ಮಾಣ ಎಲ್ಲವೂ ಇಲ್ಲಿಯೇ ಆಗಿದೆ. ಜೊತೆಗೆ ಮುಂದಿನ 15 ವರ್ಷಗಳ ಕಾಲ ಸಮಗ್ರ ನಿರ್ವಹಣೆಯ ಬೆಂಬಲವನ್ನೂ BEML ನೀಡಲಿದೆ.

3 / 5
ಪಿಂಕ್​​ ಲೈನ್​​ ಮೆಟ್ರೋ ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದ್ದು, 21 ಕಿಲೋ ಮೀಟರ್​​ ವಿಸ್ತೀರ್ಣ ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಸೇರಿ 18 ನಿಲ್ದಾಣಗಳು ಈ ಮಾರ್ಗದಲ್ಲಿವೆ.

4 / 5
2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಬಿಇಎಂಎಲ್​​ನಿಂದ ಐದು ರೈಲುಗಳು ಆಗಮಿಸುತ್ತಿದ್ದಂತೆ, ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಪಿಂಕ್‌ ಲೈನ್​​ಗಾಗಿ ಒಟ್ಟು  23 ಚಾಲಕರಹಿತ ರೈಲುಗಳನ್ನು ಬಿಇಎಂಎಲ್​​ಗೆ ಆರ್ಡರ್ ನೀಡಲಾಗಿದೆ.

5 / 5
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ

ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್

‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್

ಅರ್ಷದೀಪ್ ಮೇಲೆ ಉಗ್ರರೂಪ ತಾಳಿದ ಗಂಭೀರ್; ವಿಡಿಯೋ

ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ

Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?

ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ

ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್

ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್

ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ