ಹೇಗಿದೆ ಗೊತ್ತಾ ಪಿಂಕ್ ಲೈನ್ನ ಚಾಲಕ ರಹಿತ ಮೊದಲ ಮೆಟ್ರೋ ರೈಲು?: ಇಲ್ಲಿವೆ ಚಿತ್ರಗಳು
ನಮ್ಮ ಮೆಟ್ರೋದ ಪಿಂಕ್ ಲೈನ್ಗಾಗಿ ಬಿಇಎಂಎಲ್ ಸಂಸ್ಥೆಯು ಮೊದಲ ಚಾಲಕರಹಿತ ರೈಲಿನ ಮಾದರಿಯನ್ನು ಬಿಡುಗಡೆ ಮಾಡಿದೆ. ಈ ರೈಲು ಡಿಸೆಂಬರ್ 15 ಅಥವಾ 16ಕ್ಕೆ ಕೊತ್ತನೂರು ಡಿಪೋ ತಲುಪಲಿದೆ. ಒಟ್ಟು 23 ಚಾಲಕರಹಿತ ರೈಲುಗಳಿಗೆ ಆರ್ಡರ್ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.
Updated on:Dec 12, 2025 | 6:08 PM

ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್ ಲೈನ್ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ಮೊದಲ ರೈಲಿನ ಮಾದರಿಯನ್ನು ಬಿಇಎಂಎಲ್ ಬಿಡುಗಡೆ ಮಾಡಿದೆ. ಡಿಸೆಂಬರ್ 15 ಅಥವಾ 16ಕ್ಕೆ ಬಿಎಂಆರ್ಸಿಎಲ್ನನ ಕೊತ್ತನೂರು ಡಿಪೋವನ್ನು ಹೊಸ ರೈಲು ತಲುಪಲಿದೆ.

ಮೊದಲ ಹಂತದಲ್ಲಿ ಪಿಂಕ್ ಲೈನ್ಗೆ ಚಾಲಕ ರಹಿತ 6 ರೈಲುಗಳು ಬರಲಿದ್ದು, ಆ ಪೈಕಿ ಮೊದಲ ಪ್ರೋಟೋಟೈಪ್ ರೈಲನ್ನ ರೋಲ್ ಔಟ್ ಮಾಡಲಾಗಿದೆ. BMRCL ಎಂಡಿ ಡಾ. ಜೆ. ರವಿಶಂಕರ್ ಅವರ ನೇತೃತ್ವದಲ್ಲಿ ಈ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, BEML ಸಿಎಂಡಿ ಶಾಂತನು ರಾಯ್ ಸೇರಿ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್ ಮತ್ತು ಪಿಂಕ್ ಲೈನ್ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ. ಮೆಟ್ರೋ ಟ್ರೇನ್‌ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ BEMLನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಜಿನಿಯರಿಂಗ್ ಮತ್ತು ನಿರ್ಮಾಣ ಎಲ್ಲವೂ ಇಲ್ಲಿಯೇ ಆಗಿದೆ. ಜೊತೆಗೆ ಮುಂದಿನ 15 ವರ್ಷಗಳ ಕಾಲ ಸಮಗ್ರ ನಿರ್ವಹಣೆಯ ಬೆಂಬಲವನ್ನೂ BEML ನೀಡಲಿದೆ.

ಪಿಂಕ್ ಲೈನ್ ಮೆಟ್ರೋ ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದ್ದು, 21 ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಸೇರಿ 18 ನಿಲ್ದಾಣಗಳು ಈ ಮಾರ್ಗದಲ್ಲಿವೆ.

2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಬಿಇಎಂಎಲ್ನಿಂದ ಐದು ರೈಲುಗಳು ಆಗಮಿಸುತ್ತಿದ್ದಂತೆ, ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಪಿಂಕ್ ಲೈನ್ಗಾಗಿ ಒಟ್ಟು 23 ಚಾಲಕರಹಿತ ರೈಲುಗಳನ್ನು ಬಿಇಎಂಎಲ್ಗೆ ಆರ್ಡರ್ ನೀಡಲಾಗಿದೆ.
Published On - 7:51 pm, Thu, 11 December 25

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ
Read More




