- Kannada News Photo gallery Navratri celebration in bengaluru navadurga dolls sale on swing kannada news
ನವರಾತ್ರಿ ಹಿನ್ನೆಲೆ ಬೆಂಗಳೂರಿನಲ್ಲಿ ನವದುರ್ಗಿಯರ ದರ್ಬಾರ್; ಮೂರ್ತಿಗಳ ಖರೀದಿ ಭರಾಟೆ ಜೋರು
ನವರಾತ್ರಿ ಕೌಂಟ್ ಡೌನ್ ಆರಂಭವಾಗಿದ್ದು, ನವರಾತ್ರಿಗೆಂದೇ ನವದುರ್ಗಿಯರ ಮೂರ್ತಿಗಳು ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟಿವೆ. ನೋಡುಗರನ್ನ ಸೆಳೆಯುತ್ತಿವೆ. ನವರಾತ್ರಿಗೆ ಒಂದು ವಾರ ಮಾತ್ರ ಬಾಕಿ ಇದ್ದು, ಸಾಕಷ್ಟು ಜನರು ಆರ್ಡಾರ್ ಕೊಟ್ಟು ಖರೀದಿ ಮಾಡ್ತಿದ್ದಾರೆ.
Updated on: Sep 28, 2024 | 11:45 AM

ನವರಾತ್ರಿಗೆ ಕೌಂಟ್ ಡೌನ್ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ನವರಾತ್ರಿಯ ಸಂಭ್ರಮ ಜೋರಾಗಿದೆ. ನವರಾತ್ರಿಯಂದು ನವದುರ್ಗಿಯನ್ನ ಇಟ್ಟು ವಿಶೇಷವಾಗಿ ಪೂಜೆ ಮಾಡಿ ಹಬ್ಬವನ್ನ ಆಚಾರಿಸುವ ಪ್ರತೀತಿ ಇದೆ. ಹೀಗಾಗಿ ಈ ವರ್ಷ ಹೊಸ ಬಗೆಯ ವಿಶೇಷ ದುರ್ಗಮಾತೆಯ ಮೂರ್ತಿಗಳು ಎಂಟ್ರಿಕೊಟ್ಟಿವೆ. ನೋಡುಗರನ್ನ ಸೆಳೆಯುತ್ತಿವೆ.

ನವರಾತ್ರಿಗೆಂದೆ ಸಿಲಿಕಾನ್ ಸಿಟಿಗೆ ವಿವಿಧ ಬಗೆಯ ನವದುರ್ಗಿಯರ ಮೂರ್ತಿಗಳು ಬಂದಿದ್ದು, ನೋಡುಗರನ್ನ ಸೆಳೆಯುತ್ತಿವೆ. ಈ ಬಾರಿ ನವದುರ್ಗಿ ಮೂರ್ತಿಗಳನ್ನ ಮಣ್ಣಲ್ಲಿ ಮಾಡಿದ್ದು, ಕೊಂಚ ಬೆಲೆಯೂ ಏರಿಕೆಯಾಗಿದೆ. ನವರಾತ್ರಿಗೆ ಒಂದು ವಾರ ಮಾತ್ರ ಬಾಕಿ ಇದ್ದು, ಸಾಕಷ್ಟು ಜನರು ಆರ್ಡಾರ್ ಕೊಟ್ಟು ಖರೀದಿ ಮಾಡ್ತಿದ್ದಾರೆ.

ಈ ಬಾರಿ ದುರ್ಗಿ ಹಾಗೂ ಕಾಳಿ ಮೂರ್ತಿಯು ವಿಶೇಷ ಬಂಗಿಯಲ್ಲಿ ಮೂಡಿಬಂದಿದ್ದು, 10 ರಿಂದ 20 ಸಾವಿರದವರೆಗೂ ಮೂರ್ತಿಗಳ ಬೆಲೆ ನಿಗದಿಯಾಗಿದೆ. ಇನ್ನು, ಇದರ ಜೊತೆಗೆ ದಸರಾ ಬೊಂಬೆಗಳನ್ನ ಇಟ್ಟಿದ್ದು, ಸನಾತನ ಸಂಸ್ಕೃತಿಯನ್ನು ಸಾರುವ ಹಲವು ಬೊಂಬೆಗಳು ನೋಡುಗರನ್ನ ಸೆಳೆಯುತ್ತಿವೆ. ವ್ಯಾಪಾರ ವಹಿವಾಟು ಜೋರಾಗಿದೆ.

ನವರಾತ್ರಿ ಅಂದ್ರೆನೇ ಅಂದೊಂದು ಸಂಭ್ರಮ. ಮನೆಗಳಲ್ಲಿ ಬೊಂಬೆಯನ್ನ ಇಟ್ಟು ಸಂಭ್ರಮಿಸಿದ್ರು, ಕೆಲವರು ದೊಡ್ಡ ದೊಡ್ಡ ಮೂರ್ತಿಗಳನ್ನ ಇಟ್ಟು ನವದುರ್ಗಿಯನ್ನ ಆರಾಧಿಸುತ್ತಾರೆ.

ಈ ವರ್ಷ ನವರಾತ್ರಿಯನ್ನ ಅದ್ದೂರಿಯಿಂದ ಬರ ಮಾಡಿಕೊಳ್ಳುತ್ತಿದ್ದು, ವಿವಿಧ ನವದುರ್ಗಿಗಳನ್ನ ಖರೀದಿ ಮಾಡುವುದಕ್ಕೆ ಬಂದಿದ್ದೀವಿ. ಈ ಬಾರಿ ಮಣ್ಣಿನ ಮೂರ್ತಿಗಳನ್ನ ಹೆಚ್ಚಾಗಿ ತಯಾರಿಸಲಾಗಿದೆ. ಹೀಗಾಗಿ ಬೆಲೆಯು ಕೊಂಚ ಜಾಸ್ತಿ ಇದೆ. ಆದ್ರು ಖರೀದಿ ಮಾಡ್ತಿದ್ದೀವಿ ಅಂತ ಸಿಲಿಕಾನ್ ಮಂದಿ ಹೇಳಿದ್ರು.

ಒಟ್ನಲ್ಲಿ, ನವರಾತ್ರಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಸಿಲಿಕಾನ್ ಸಿಟಿಯಲ್ಲಿ ಹಬ್ಬದ ತಯಾರಿ ಜೋರಾಗಿದೆ. ನವರಾತ್ರಿಯ ಸಡಗರ ಸಂಭ್ರಮ ಸಧ್ಯ ಸಿಲಿಕಾನ್ ಸಿಟಿಯಲಿ ಕಳೆಗಟ್ಟಿದೆ.



