- Kannada News Photo gallery Nepalis worship dog to please Lord Yama, this is a special festival of Kukur Tihar
Nepal Festival: ಯಮ ದೇವನನ್ನು ಮೆಚ್ಚಿಸಲು ಶ್ವಾನಕ್ಕೆ ಪೂಜೆ ಮಾಡಿದ ನೇಪಾಳಿಗರು, ಇದು ಕುಕುರ್ ತಿಹಾರ್ ಹಬ್ಬ ವಿಶೇಷ
ನೇಪಾಳದಲ್ಲಿ ಪ್ರತಿ ವರ್ಷ ಹಿಂದೂ ಹಬ್ಬವಾದ 'ಕುಕುರ್ ತಿಹಾರ್' ಅನ್ನು ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಯಮನನ್ನು ಮೆಚ್ಚಿಸಲು ಶ್ವಾನಗಳನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಶ್ವಾನಗಳಿಗೆ ಮಾಂಸ, ಹಾಲು, ಮೊಟ್ಟೆ, ನಾಯಿ ತಿನ್ನುವಂತಹ ಆಹಾರಗಳನ್ನು ನೀಡಲಾಗುತ್ತದೆ.
Updated on:Oct 26, 2022 | 5:19 PM

dog day in nepal

dog day in nepal

ಕಠ್ಮಂಡುವಿನ ಕೆನಲ್ ವಿಭಾಗದಲ್ಲಿ ಕುಕ್ಕೂರ್ ತಿಹಾರ್ದಂದು ಶ್ವಾನ ಉತ್ಸವ ನಡೆಯಿತು ಈ ಸಂದರ್ಭದಲ್ಲಿ ನೇಪಾಳದ ಪೋಲೀಸ್ ಒಬ್ಬರು ಪೊಲೀಸ್ ಶ್ವಾನಕ್ಕೆ ಆಹಾರವನ್ನು ನೀಡಿದರು.

ಇಲ್ಲಿ ಶ್ವಾನಗಳಿಗೆ ಮಾಂಸ, ಹಾಲು, ಮೊಟ್ಟೆ ಮತ್ತು ಶ್ವಾನ ತಿನ್ನುವ ವಿವಿಧ ಆಹಾರಗಳನ್ನು ನೀಡುತ್ತಾರೆ.

ಪಪ್ಪಿ ಹೆಸರಿನ ಪೊಲೀಸ್ ಶ್ವಾನ ಹಬ್ಬದ ಸಂದರ್ಭದಲ್ಲಿ 'ಉತ್ತಮ ಶ್ವಾನ' ಎಂದು ಪದಕವನ್ನು ನೀಡಲಾಗಿತ್ತು.

ಹಬ್ಬದ ಸಂದರ್ಭದಲ್ಲಿ ನೇಪಾಳದ ಪೋಲೀಸ್ ಒಬ್ಬರು ಪೊಲೀಸ್ ಶ್ವಾನಕ್ಕೆ ಹಣೆಯ ಮೇಲೆ ಕುಂಕುಮ ಹಾಕಿ, ಮಾರಿಗೋಲ್ಡ್ ಬಿಸ್ಕಟ್ ನೀಡಿ ಹೂವನ್ನು ಹಾಕುತ್ತಿರುವುದು ಕಂಡುಬಂದಿದೆ.

ಕುಕ್ಕೂರ್ ತಿಹಾರ್ ಸಂದರ್ಭದಲ್ಲಿ ಹಲವು ಪೊಲೀಸ್ ಶ್ವಾನಗಳನ್ನು ಹೂವಿನ ಹಾರ ಹಾಕಿ ಅಲಂಕರಿಸಲಾಗುತ್ತದೆ.

ಕುಕ್ಕೂರ್ ತಿಹಾರ್ ಶ್ವಾನ ಉತ್ಸವದ ಸಂದರ್ಭದಲ್ಲಿ ಶ್ವಾನಗಳಿಗಾಗಿ ಹಲವಾರು ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿದೆ. ಶ್ವಾನಯೊಂದು ಸಾಹಸ ಪ್ರದರ್ಶನ ಮಾಡುತ್ತಿರುವುದು ಕೂಡ ಇಲ್ಲಿ ಕಂಡು ಬಂದಿದೆ.

ಈ ಹಬ್ಬದಂದು, ಜನರು ಯಮನನ್ನು ಮೆಚ್ಚಿಸಲು ನಾಯಿಗಳನ್ನು ಪೂಜಿಸುತ್ತಾರೆ, ಏಕೆಂದರೆ ಶ್ವಾನಗಳು ಯಮನ ಸಂದೇಶವಾಹಕರು ಎಂದು ಹೇಳಲಾಗುತ್ತದೆ.

ಹಬ್ಬದ ಸಂದರ್ಭದಲ್ಲಿ ನೇಪಾಳದ ಪೊಲೀಸರು ತಮ್ಮ ಶ್ವಾನಗಳೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿದ್ದರು
Published On - 5:18 pm, Wed, 26 October 22



















