Updated on: Jan 23, 2022 | 12:18 PM
ಜನವರಿ 23, 2022 ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವಾಗಿದೆ. ಅವರ ಪ್ರತಿಮೆಗೆ ಹಾರ ಹಾಕಿ ಪೂಜಿಸಲಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದರು. ಕಲ್ಕತ್ತಾದಲ್ಲಿರುವ ನೇತಾಜಿ ಭವನದ ಮುಂಭಾಗದ ಚಿತ್ರ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ನಮ್ಮ ದೇಶಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕಲ್ಕತ್ತಾದ ಎಲ್ಜಿನ್ ರೋಡ್ ನಿವಾಸದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಸಂದರ್ಶಕರೊಬ್ಬರು ಗೌರವ ನಮನ ಸಲ್ಲಿಸುತ್ತಿರುವುದು
ನೇತಾಜಿ ಅವರ 125ನೇ ಜಯಂತಿ ಅಂಗವಾಗಿ ನೇತಾಜಿ ಭವನವನ್ನು ಹೂವಿನ ಅಲಂಕಾರ ಮಾಡಲಾಗಿದೆ. ಜನರು ವೀಕ್ಷಣೆಗೆ ಭೇಟಿ ನೀಡುತ್ತಾರೆ.
1941ರಲ್ಲಿ ಬ್ರಿಟಿಷರಿಂದ ಗೃಹಬಂಧನಕ್ಕೆ ಒಳಗಾದ ನೇತಾಜಿ ಕೋಲ್ಕತ್ತಾದಿಂದ ಕಾಬೂಲ್‌ಗೆ ಪಲಾಯನಗೈದ 'ಗ್ರೇಟ್ ಎಸ್ಕೇಪ್' ಕಾರ ಇದಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಮ್ಮ ದೇಶಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ ಎಂದು ಪ್ರಧಾನಿ ಮೋದಿ ಹೇಳಿದರು.
1945 ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.