Sign In

By signing in or creating an account, you agree with Associated Broadcasting Company's Terms & Conditions and Privacy Policy.

Force Gurkha: ಮಹೀಂದ್ರಾ ಥಾರ್​ಗೆ ಟಕ್ಕರ್ ಕೊಡಲು ಬರುತ್ತಿದೆ ಫೋರ್ಸ್​ ಗೂರ್ಖಾ

New Force Gurkha 2021: 2021ರ ಫೋರ್ಸ್ ಗೂರ್ಖಾ ಈಗಾಗಲೇ ರಸ್ತೆಗಿಳಿದಿರುವ ಮಹೀಂದ್ರ ಥಾರ್ ಎಸ್‌ಯುವಿಯೊಂದಿಗೆ ಸ್ಪರ್ಧಿಸಲಿದೆ. ಥಾರ್ ಕಳೆದ ಅಕ್ಟೋಬರ್ 2 ರಂದು ಬಿಡುಗಡೆ ಆಗಿತ್ತು.

TV9 Web
| Updated By: ಝಾಹಿರ್ ಯೂಸುಫ್

Updated on:Sep 15, 2021 | 9:53 PM

ಭಾರತೀಯ ರಸ್ತೆಗಳಲ್ಲಿ ಧೂಳೆಬ್ಬಿಸಿದ ಮಹೀಂದ್ರಾ ಥಾರ್​ಗೆ ಪೈಪೋಟಿ ನೀಡಲು ಫೋರ್ಸ್ ಮೋಟರ್ಸ್​ ಕಂಪೆನಿಯು ಹೊಸ ಗೂರ್ಖಾ ಎಸ್​ಯುವಿ-2021 ಅನ್ನು ಇದೇ ತಿಂಗಳು 15 ರಂದು ಬಿಡುಗಡೆ ಮಾಡಲಿದೆ.  2020ರ ಆಟೋ ಎಕ್ಸ್‌ಪೋ ಪ್ರದರ್ಶಿಸಲಾಗಿರುವ ಫೋರ್ಸ್ ಗೂರ್ಖಾ ಆಫ್-ರೋಡ್ ಎಸ್‌ಯುವಿ ಎಂಬುದು ವಿಶೇಷ.

1 / 5
ಫೋರ್ಸ್ ಗೂರ್ಖಾದ ವೈಶಿಷ್ಟ್ಯಗಳು- ಈ ವಾಹನದ ಮುಂಭಾಗದಲ್ಲಿ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ರೌಂಡ್ ಆಕಾರದ ಎಲ್‌ಇಡಿ ಹೆಡ್‌ಲೈಟ್‌ಗಳು, ಆಕರ್ಷಕ ಗ್ರಿಲ್ ಮತ್ತು ಫ್ರಂಟ್ ಬಂಪರ್ ನೀಡಲಾಗಿದೆ. ಹಾಗೆಯೇ ಫ್ರಂಟ್ ಫೆಂಡರ್‌ಗಳ ಮೇಲಿರುವ ಟರ್ನ್ ಇಂಡಿಕೇಟರ್‌ಗಳು, ವಾಟರ್-ವೇಡಿಂಗ್‌ಗಾಗಿ ಲಾಂಗ್ ಸ್ನಾರ್ಕೆಲ್ ಮತ್ತು ರೂಫ್ ಕ್ಯಾರಿಯರ್ ಇದರಲ್ಲಿ ಕಾಣಬಹುದು.

2 / 5
ಇನ್ನು ಫೋರ್ಸ್ ಗೂರ್ಖಾದ ಒಳಭಾಗ ಹಳೆಯ ಮಾದರಿಗಿಂತ ಹೆಚ್ಚು ಪ್ರೀಮಿಯಂ ಆಗಿರುತ್ತದೆ. ಇದನ್ನು ಸಂಪೂರ್ಣ ಕಪ್ಪು ಒಳಾಂಗಣ ಥೀಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, ಆಫ್-ರೋಡಿಂಗ್​ಗೆ ಅನುಕೂಲವಾಗುವಂತೆ  ಧೂಳು ಮತ್ತು ನೀರು ನಿರೋಧಕವಾಗಿಸಲು ಸಾಕಷ್ಟು ಬಲವಾದ ಪ್ಲಾಸ್ಟಿಕ್ ಅನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ.  ಇನ್ನು ಹೊಸ ತಂತ್ರಜ್ಞಾನದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್ ಇದರಲ್ಲಿರುವ ನಿರೀಕ್ಷೆಯಿದೆ.

3 / 5
ಫೋರ್ಸ್ ಮೋಟಾರ್ 2021ರ ಗೂರ್ಖಾವನ್ನು ಎರಡು ಮಾಡೆಲ್​ಗಳಲ್ಲಿ ಪರಿಚಯಿಸಲಿದೆ. ಒಂದರಲ್ಲಿ 2 ಡೋರ್ ಮಾತ್ರ ಇರಲಿದ್ದು, ಇನ್ನೊಂದರಲ್ಲಿ 5 ಡೋರ್ಸ್​ ನೀಡಲಾಗುತ್ತಿದೆ. ಇಲ್ಲಿ ಎರಡು ಡೋರ್​ಗಳ ವಾಹನ ಸ್ಪೋಟಿಂಗ್ ಮಾದರಿ ಅಥವಾ ಆಫ್​ ರೋಡ್​ ಮಾದರಿಗೆ ಹೆಚ್ಚು ಸೂಕ್ತ ಎನ್ನಲಾಗಿದೆ. ಇನ್ನು ಈ ಹೊಸ ವಾಹನ 2.6 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದ್ದು, ಅದು 89 ಬಿಎಚ್‌ಪಿ ಪವರ್ ಮತ್ತು 260 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಈ ಎಸ್‌ಯುವಿಯಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.

4 / 5
2021ರ ಫೋರ್ಸ್ ಗೂರ್ಖಾ ಈಗಾಗಲೇ ರಸ್ತೆಗಿಳಿದಿರುವ ಮಹೀಂದ್ರ ಥಾರ್ ಎಸ್‌ಯುವಿಯೊಂದಿಗೆ ಸ್ಪರ್ಧಿಸಲಿದೆ. ಥಾರ್ ಕಳೆದ ಅಕ್ಟೋಬರ್ 2 ರಂದು ಬಿಡುಗಡೆ ಆಗಿತ್ತು. ಇದಾಗ್ಯೂ ಆಫ್​ ರೋಡ್​ಗೆ ಸೂಕ್ತವಾಗುವಂತಹ ಯಾವುದೇ ಕಡಿಮೆ ಬೆಲೆಯ ಎಸ್​ಯುವಿ ಭಾರತದಲ್ಲಿ ಬಿಡುಗಡೆ ಆಗಿರಲಿಲ್ಲ. ಇದೀಗ ಫೋರ್ಸ್ ಗೂರ್ಖಾ ಎಂಟ್ರಿಯೊಂದಿಗೆ ಥಾರ್​ಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ. ಹಾಗೆಯೇ ಹೊಸ ಗೂರ್ಖಾ ಬೆಲೆ ರೂ .10 ಲಕ್ಷದಿಂದ ರೂ .12 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರುವ ಸಾಧ್ಯತೆಯಿದೆ.

5 / 5

Published On - 9:38 pm, Tue, 14 September 21

Follow us
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್

ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ

ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?

ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?

ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ

ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್