ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಲವ್ ಕೇಸ್’ ಸಿನಿಮಾ ಮುಹೂರ್ತ

Updated on: Nov 07, 2025 | 6:58 PM

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ‘ಲವ್ ಕೇಸ್’ ಸಿನಿಮಾದ ಮುಹೂರ್ತ ಸಮಾರಂಭದ ಫೋಟೋಗಳು ಇಲ್ಲಿವೆ. ಸುಧಾರಾಣಿ, ಶ್ರೀನಗರ ಕಿಟ್ಟಿ, ನಾಗಭೂಷಣ್, ಪ್ರಮೋದ್ ಶೆಟ್ಟಿ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದರು. ‘ಮಹಾನಟಿ’ ಖ್ಯಾತಿಯ ವಂಶಿ, ‘ಸಹಿಪ್ರಾ ಶಾಲೆ’ ಸಿನಿಮಾ ಖ್ಯಾತಿಯ ರಂಜನ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

1 / 5
ಮೋಹನ್ ಬಾಬು ಅವರು ‘ಎಂ.ಬಿ. ಕ್ರಿಯೇಷನ್ಸ್’ ಸಂಸ್ಥೆಯ ಮೂಲಕ ‘ಲವ್ ಕೇಸ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೈಶ್ ನಿರ್ದೇಶನದ ಈ ಸಿನಿಮಾದ ಮುಹೂರ್ತ ಇಂದು (ನ.7) ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ‌ ನಡೆಯಿತು.

2 / 5
ಸುಧಾರಾಣಿ, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ನಾಗಭೂಷಣ, ಪ್ರಮೋದ್ ಶೆಟ್ಟಿ, ‘ಮಹಾನಟಿ’ ರಿಯಾಲಿಟಿ ಶೋ ಖ್ಯಾತಿಯ ವಂಶಿ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಖ್ಯಾತಿಯ ರಂಜನ್ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

3 / 5
‘ಲವ್ ಕೇಸ್’ ಸಿನಿಮಾದ ಶೀರ್ಷಿಕೆಗೆ ‘ಪ್ಯೂರ್ ಲವ್ ಸ್ಟೋರಿ’ ಎಂಬ ಅಡಿ ಬರಹವಿದೆ.‌ ವಿ. ಹರಿಕೃಷ್ಣ ಅವರ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಮಾಸ್ತಿ ಅವರ ಸಂಭಾಷಣೆ, ಅನುಕೃಷ್ಣ ಸಂಕಲನ ಈ ಚಿತ್ರಕ್ಕಿದೆ.

4 / 5
‘ಲವ್ ಕೇಸ್’ ಸಿನಿಮಾಗೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಮುಹೂರ್ತದ ವೇಳೆ ಚಿತ್ರದ ಶೀರ್ಷಿಕೆಯನ್ನ ಚಿಂತಾಮಣಿ ಮಾಜಿ ಶಾಸಕ ಜೆ.ಕೆ. ಕೃಷ್ಣಾ ರೆಡ್ಡಿ ಅವರು ಅನಾವರಣ ಮಾಡಿದರು.

5 / 5
ವೇದಿಕೆಯಲ್ಲಿ ಹಿರಿಯ ನಟಿ ಸುಧಾರಾಣಿ , ಶ್ರೀನಗರ ಕಿಟ್ಟಿ, ನಾಗಭೂಷಣ, ಮಾಸ್ತಿ, ನಿರ್ದೇಶಕ ಜೈಶ್ ಅವರು ಮಾತಾಡಿದರು. 6 ತಿಂಗಳುಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.