‘ಭೀಮ್ಲಾ ನಾಯಕ್’ ನೋಡಿ ಅಪ್ಸೆಟ್ ಆದ ನಿತ್ಯಾ ಮೆನನ್?; ನಿರ್ದೇಶಕರ ವಿರುದ್ಧ ಅಸಮಾಧಾನ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Feb 28, 2022 | 6:00 AM
ಮೂಲ ಸಿನಿಮಾದಲ್ಲಿ ಪೊಲೀಸ್ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ನಿತ್ಯಾ ಅವರನ್ನು ತೋರಿಸಲಾಗಿದೆ.
1 / 5
ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ರಿಮೇಕ್ ಆದರೂ ಒಳ್ಳೆಯ ಆ್ಯಕ್ಷನ್ ದೃಶ್ಯಗಳನ್ನು ಬೆರೆಸಿ, ಟಾಲಿವುಡ್ ಮಂದಿಗೆ ಇಷ್ಟವಾಗುವಂತೆ ಬದಲಾಯಿಸಿ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾ ಬಗ್ಗೆ ನಾಯಕಿ ನಿತ್ಯಾ ಮೆನನ್ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
2 / 5
ಪವನ್ ಕಲ್ಯಾಣ್ ಅವರು ಈ ಸಿನಿಮಾದಲ್ಲಿ ಭೀಮ್ಲಾ ನಾಯಕ್ ಎಂಬ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಭೀಮ್ಲಾ ನಾಯಕ್ ಪತ್ನಿಯಾಗಿ ನಿತ್ಯಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಹೆಚ್ಚುಹೊತ್ತು ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ
3 / 5
ಮೂಲ ಸಿನಿಮಾದಲ್ಲಿ ಪೊಲೀಸ್ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ಇದನ್ನು ತೋರಿಸಲಾಗಿದೆ. ಈ ಕಾರಣಕ್ಕೆ ನಿತ್ಯಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.
4 / 5
ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾ ಕಾಣಿಸಿಕೊಂಡಿದ್ದರು. ‘ಭೀಮ್ಲಾ ನಾಯಕ್’ ಹಾಗೂ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾ ಡೈರೆಕ್ಷನ್ ಮಾಡಿದ್ದು ತ್ರಿವಿಕ್ರಂ ಶ್ರೀನಿವಾಸ್.
5 / 5
‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾಗೆ ಇದೇ ರೀತಿ ಆಗಿತ್ತು. ಅಲ್ಲಿಯೂ ಅವರದ್ದು ಅತಿಥಿ ಪಾತ್ರದ ರೀತಿಯಲ್ಲೇ ತೋರಿಸಲಾಗಿತ್ತು. ಈ ವೇಳೆ ನಿತ್ಯಾ ಅಸಮಾಧಾನಗೊಂಡ ಬಗ್ಗೆ ವರದಿ ಆಗಿತ್ತು. ಈಗ ಅವರಿಗೆ ಎರಡನೇ ಬಾರಿಯೂ ಹಾಗೆಯೇ ಆಗಿದೆ. ಇದು ಅವರಿಗೆ ಬೇಸರ ತರಿಸಿದೆ ಎಂದು ವರದಿ ಆಗಿದೆ.