- Kannada News Photo gallery No Visa Required: You can visit these countries for tourism without a visa in kannada news
No Visa Required: ನೀವು ವೀಸಾ ಇಲ್ಲದೆ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು
ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ ವೀಸಾ ಅಗತ್ಯವಿಲ್ಲದೇ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು. ಆದ್ದರಿಂದ ನೀವು ವೀಸಾ-ಮುಕ್ತವಾಗಿ ಪ್ರಯಾಣಿಸಬಹುದಾದ ಅತ್ಯಂತ ಸುಂದರವಾದ ದೇಶಗಳ ಕುರಿತು ಮಾಹಿತಿ ಇಲ್ಲಿವೆ.
Updated on:Jan 20, 2023 | 5:30 PM

ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ ವೀಸಾ ಅಗತ್ಯವಿಲ್ಲದೇ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು. ಆದ್ದರಿಂದ ನೀವು ವೀಸಾ-ಮುಕ್ತವಾಗಿ ಪ್ರಯಾಣಿಸಬಹುದಾದ ಅತ್ಯಂತ ಸುಂದರವಾದ ದೇಶಗಳ ಕುರಿತು ಮಾಹಿತಿ ಇಲ್ಲಿವೆ.

ಭೂತಾನ್: ಭಾರತದ ಅತ್ಯಂತ ಸುಂದರವಾದ ನೆರೆ ರಾಷ್ಟ್ರವಾದ ಭೂತಾನ್ಗೆ ಪ್ರವಾಸ ಕೈಗೊಳ್ಳಬಹುದು. ಆದರೆ ನಿಮ್ಮ ಪ್ರವಾಸವು 14 ದಿನಗಳ ಒಳಗಡೆ ಇದ್ದರೆ ಇಲ್ಲಿಗೆ ಭೇಟಿ ನೀಡಲು ವೀಸಾದ ಅಗತ್ಯವಿಲ್ಲ.

ಫಿಜಿ: ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರವಾಗಿದ್ದು, ಇದು ಆಸ್ಟ್ರೇಲಿಯಾದ ಈಶಾನ್ಯಕ್ಕೆ ಇದೆ. ವೀಸಾ ಇಲ್ಲದೇ ನೀವಿಲ್ಲಿ 120 ದಿನಗಳವರೆಗೆ ಉಳಿದುಕೊಳ್ಳಬಹುದು.

Budget 2023 revised Tax Upfront of 20 percent for Investing In Overseas Markets Or Holidaying Abroad

ನೇಪಾಳ: ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ನೀಡುವ ಮತ್ತೊಂದು ರಾಷ್ಟ್ರವೇ ನೇಪಾಳ. ಈ ದೇಶದಲ್ಲಿ ವಿಶ್ವದ ಅತ್ಯಂತ ಅದ್ಭುತವಾದ ಪರ್ವತ ಭೂದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದು.

ಕಝಾಕಿಸ್ತಾನ್: ಈ ರಾಷ್ಟ್ರವು ಪ್ರಸಿದ್ದವಾದ ಪ್ರವಾಸಿತಾಣವಾಗಿಲ್ಲದಿದ್ದರೂ ಸಹ ಐತಿಹಾಸ ಸ್ಥಳಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವವರಿಗೆ ಇದು ಉತ್ತಮ ತಾಣವಾಗಿದೆ. ನೀವಿಲ್ಲಿ ವೀಸಾ ಇಲ್ಲದೇ 14 ದಿನಗಳವರೆಗಿನ ಪ್ರವಾಸ ಕೈಗೊಳ್ಳಬಹುದು.

ಟ್ರಿನಿಡಾಡ್ ಮತ್ತು ಟೊಬಾಗೊ: ದ್ವೀಪ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬಾಗೋಗೆ ಪ್ರವಾಸಕ್ಕೆ ಒಂದು ಉತ್ತಮ ತಾಣವಾಗಿದೆ. ವೀಸಾ ಇಲ್ಲದೆ ನೀವಿಲ್ಲಿಗೆ 90 ದಿನಗಳವರೆಗಿನ ಪ್ರವಾಸ ಕೈಗೊಳ್ಳಬಹುದು. ಇದು ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಅದ್ಭುತವಾದ ತಾಣವಾಗಿದೆ.
Published On - 4:47 pm, Fri, 20 January 23




