Padhe Bharat Badhe Bharat: ಮರಳುಗಾಡಿನಲ್ಲಿ ಶಾಲಾ ಮಕ್ಕಳಿಗೆ ದಕ್ಕಿದೆ ತಂಪಾದ ಸೂರು! ಚಿತ್ರಗಳನ್ನು ನೋಡಿ

|

Updated on: Jun 25, 2024 | 3:33 PM

Nokha Village Community Centre: ಬಿಕಾನೇರ್ ಜಿಲ್ಲೆಯ ನೋಖಾ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಮಹತ್ವಾಕಾಂಕ್ಷಿ ನೋಖಾ ವಿಲೇಜ್ ಕಮ್ಯುನಿಟಿ ಸೆಂಟರ್ ಅಲ್ಲಿದೆ. ದೀರ್ಘವೃತ್ತದ ಕಲಾ ಕೇಂದ್ರವಾಗಿ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಇದು ನೋಖಾ ಗ್ರಾಮಕ್ಕೆ ಮಾತ್ರವಲ್ಲದೆ ಸುತ್ತಲ 143 ಕುಗ್ರಾಮಗಳಿಗೂ ಕಲಿಕೆ ಮತ್ತು ಪ್ರದರ್ಶನ ಕಲೆಗಳ ಕೇಂದ್ರಸ್ಥಾನವಾಗಿ ಕಾರ್ಯನಿರ್ವಹಿಸುತ್ತಿದೆ. ಏನಿದರ ವಿಶೇಷ? ಚಿತ್ರಗಳಲ್ಲಿ ನೀವೆ ನೋಡಿ 

1 / 10
ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ನೋಖಾ ಗ್ರಾಮದಲ್ಲಿ (Nokha village, Bikaner district, Rajasthan) ಅನೇಕ ಸರ್ಕಾರಿ ಶಾಲೆಗಳಲ್ಲಿ (government schools) ಗ್ರಂಥಾಲಯವಿಲ್ಲ (library). ಮನೆಯಲ್ಲಿರುವ ಪುಸ್ತಕಗಳನ್ನೇ ಬೆನ್ನುಮೂಳೆಗೆ ಹೊರೆಯಾಗಿಸಿಕೊಂಡು ಸಾಲೆಗೆ ತೆಗೆದುಕೊಂಡು ಹೋಗಬೇಕಾದ ದುಃಸ್ಥಿತಿ ಇದೆ. ಇನ್ನು ಶಾಲೆಗೆ ಹೋದ ಮೇಲೆ ಅಲ್ಲಿ ಸಮೀದಲ್ಲಿರುವ  ಮರದ ನೆರಳಿನಲ್ಲಿ ಕುಳಿತು ಪುಸ್ತಕ ಹರಡಿಕೊಂಡು ಓದಬೇಕಾದ ಸ್ಥಿತಿಯಿದೆ. ಆದರೂ ಸ್ಥಳೀಯರು ಹೇಳುವಂತೆ, ಸೂರ್ಯನು ವರ್ಷದ ಎಂಟು ತಿಂಗಳುಗಳವರೆಗೆ ಅತ್ಯಂತ ಪ್ರಖರವಾದ ಬೆಳಕನ್ನು ಸೂಸುತ್ತಿದ್ದರೂ ಆ ಭೂಗೋಳದ ಆ ಭಾಗದಲ್ಲಿ ಚಿಕ್ಕ ನೆರಳು ಸಹ ಇರುವುದಿಲ್ಲ; ಇದ್ದರೂ ಅದು ಸಾಕಾಗುವುದಿಲ್ಲ. ಏಕೆಂದರೆ ಎಲ್ಲ ದಿನಗಳಲ್ಲೂ ಅಲ್ಲಿ 35 ರಿಂದ  40-45 ° ನಡುವಿನ ತಾಪಮಾನ ರಾಚುತ್ತಿರುತ್ತದೆ.

2 / 10
ಆದರೆ, ಹೊಸದಾಗಿ ಸ್ಥಾಪಿಸಲಾದ ಮಹತ್ವಾಕಾಂಕ್ಷಿ ನೋಖಾ ವಿಲೇಜ್ ಕಮ್ಯುನಿಟಿ ಸೆಂಟರ್ (Nokha Village Community Centre) ಅಲ್ಲಿದೆ. ಅದನ್ನು ಮುಂಬೈ ಮೂಲದ ಆರ್ಕಿಟೆಕ್ಟ್​​ (architect) ಸಂಜಯ್ ಪುರಿ ಅವರು ದೀರ್ಘವೃತ್ತದ ಕಲಾ ಕೇಂದ್ರವಾಗಿ ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ಇದು ಕೇವಲ ನೋಖಾ ಗ್ರಾಮಕ್ಕೆ ಮಾತ್ರವಲ್ಲದೆ ನೆರೆಹೊರೆಯ 143 ಕುಗ್ರಾಮಗಳಿಗೂ ಕಲಿಕೆ ಮತ್ತು ಪ್ರದರ್ಶನ ಕಲೆಗಳ ಕೇಂದ್ರಸ್ಥಾನವಾಗಿ ಕಾರ್ಯನಿರ್ವಹಿಸುತ್ತದೆ.

3 / 10
ಕೇವಲ 9,000 ಚದರ ಅಡಿಗಳ ಬಿಲ್ಟ್-ಅಪ್ ಪ್ರದೇಶವನ್ನು ಈ ಕೇಂದ್ರ ಆಕ್ರಮಿಸಿಕೊಂಡಿದೆ. ಸುರುಳಿಯಂತಹ ಮರಳಿನ ದಿಬ್ಬ, ಸುತ್ತಲಿನ ಮರುಭೂಮಿಗೆ ಕಳಶಪ್ರಾಯವಾಗಿ, ಒಟ್ಟಾರೆಯಾಗಿ ಐದು ಪಟ್ಟು ಹೆಚ್ಚು ಬಳಸಬಹುದಾದ ಸ್ಥಳವನ್ನು ನೀಡುತ್ತದೆ. ಇದು 27,000 ಚದರ ಅಡಿ ತೆರೆದ ಮುಕ್ತ ಯುಕ್ತ ಸಭಾಂಗಣವಾಗಿದೆ. ಇಳಿಜಾರಾದ ಮೇಲ್ಛಾವಣಿ ಉದ್ಯಾನಗಳನ್ನು ಒಳಗೊಂಡಿದೆ.  ಅಲ್ಲಿ ಸುತ್ತಲ ಮರುಭೂಮಿಯ ಮನೋಹರ ದೃಶ್ಯವನ್ನು ಸಾಧ್ಯವಿರುವ ಎಲ್ಲ ದಿಕ್ಕುಗಳಿಂದಲೂ ನೀಡಬಹುದಾಗಿದೆ. "ಚಿಂತನಶೀಲ ವಾಸ್ತುಶೈಲಿಯು ದೊಡ್ಡ ದೊಡ್ಡ ಹೆಜ್ಜೆ ಗುರುತುಗಳಿಲ್ಲದೆ ವಿಸ್ತಾರವಾದ ಸಮುದಾಯ ಸ್ಥಳಗಳನ್ನು ಹೇಗೆ ರಚಿಸಬಹುದು ಎಂಬುದನ್ನು ಈ ಯೋಜನೆಯು ಸಾದರಪಡಿಸುತ್ತದೆ ಎಂದು www.vogue.in ಮ್ಯಾಗಜೀನ್​​ಗೆ ಆರ್ಕಿಟೆಕ್ಟ್​​ ಸಂಜಯ್  ಪುರಿ ಮನೋಜ್ಞವಾಗಿ ತಿಳಿಸಿದ್ದಾರೆ.

4 / 10

ಈ ಸಮುದಾಯ ಕೇಂದ್ರವನ್ನು ಯಾರು ಬೇಕಾದರೂ ಬಳಸಬಹುದು. ಏನನ್ನಾದರೂ ಅನ್ವೇಷಣೆ ಮಾಡುವ ಮನಸ್ಥಿತಿ ನಿಮಗಿದೆಯಾ? ಈ ಮ್ಯೂಸಿಯಂ ಕಡೆಗೆ ಹೆಜ್ಜೆ ಹಾಕಿ ಸಾಕು. ಈ ಭೂ ಭಾಗದ ಮಕ್ಕಳು ಇಲ್ಲಿರುವ ಡಿಜಿಟಲ್ ಮಕ್ಕಳ ಗ್ರಂಥಾಲಯವನ್ನು ಬ್ರೌಸ್ ಮಾಡಬಹುದು. ಕೊತಕೊತನೆ ಕುದಿಯುವ ಬಿಸಿಲಿನಿಂದ ಬೇಸತ್ತಿದ್ದೀರಾ? ದಕ್ಷಿಣ ಭಾಗದಲ್ಲಿ ಹುಲ್ಲುಹಾಸಿನ ಮೇಲೆ ನೆರಳಿನಾಶ್ರಯ ಪಡೆಯಹುದು.

5 / 10
ಅದಾದ ಮೇಲೆ ಸಂಜೆ ವೇಳೆಗೆ... ಸೂರ್ಯಾಸ್ತಮಾನಕ್ಕೆ ಬನ್ನಿ, ಆಂಫಿಥಿಯೇಟರ್‌ನಿಂದ ಸಜ್ಜುಗೊಂಡಿರುವ ತೆರೆದ ಪ್ರಾಂಗಣ, ಸಂಗೀತ ಪ್ರದರ್ಶನಗಳು, ಮಾತುಕತೆಗಳು ಮತ್ತು ಸಾಮಾಜಿಕ ಸಂವಹನಗಳೊಂದಿಗೆ ಜೀವನ ಚಿಲುಮೆಯನ್ನು ಚಿಮ್ಮುತ್ತದೆ. ಇಷ್ಟೆಲ್ಲಾ ಪ್ರದರ್ಶನಗಳು ಮುಗಿದು ಜನರು ಚದುರಿಹೋದಾಗ, ಅದು ನಿಮಗೆ ನಕ್ಷತ್ರ ವೀಕ್ಷಣೆಗೆ ಮುಕ್ತವಾಗಿರುತ್ತದೆ.

6 / 10
ಅತ್ತ ರಾತ್ರಿಯಾಗುತ್ತಿದ್ದಂತೆ ಸೂರ್ಯನು ತನ್ನ ಮನೆಯೊಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಇತ್ತ  ಆರ್ಕಿಟೆಕ್ಟ್​​ ಪುರಿ ನಿರ್ಮಿಸಿರುವ ವಿಶಾಲ ಪ್ರಾಂಗಣಗಳು ತಂಪುತಂಪು ಅನುಭವ ನೀಡತೊಡಗುತ್ತವೆ. ಮೊಟ್ಟೆಯ ಆಕಾರದ ಗ್ರಂಥಾಲಯವು ಇದಕ್ಕಂದು ಒಳ್ಳೆಯ ಉದಾಹರಣೆಯಾಗಿದೆ. ಇದು ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಮರಳುಗಲ್ಲಿನಿಂದ ಹೊದಿಸಲ್ಪಟ್ಟಿದೆ. ದಿನವಿಡೀ ಶೇಪ್‌ಶಿಫ್ಟಿಂಗ್ ನೆರಳುಗಳನ್ನು ಹೊರಸೂಸುವಾಗ ಶಾಖದ ಪ್ರಖರತೆಯನ್ನು ಕಡಿಮೆ ಮಾಡಿರುತ್ತದೆ.

7 / 10
ವಸ್ತು ಸಂಗ್ರಹಾಲಯವನ್ನು ಸಹ ಅದೇ ರೀತಿಯಲ್ಲಿ ಸೂರ್ಯನ ಪ್ರತಾಪದಿಂದ ಮುಕ್ತಗೊಳಿಸಲಾಗಿದೆ. ಕಡೆಯಲ್ಪಟ್ಟ ಹಿನ್ಸರಿತಗಳಿಂದಾಗಿ (scooped recesses) ಇದು ಸಾಧ್ಯವಾಗಿದೆ.  ಇದು ಪ್ರಖರ ಬೆಳಕನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಂತೆಯೇ, ಮೇಲ್ಛಾವಣಿಯ ಉದ್ಯಾನಗಳು, ಕಲ್ಲಿನ ಪದರಗಳು ಪರದೆಗಳಂತೆ, ಉತ್ತರ-ಮುಖದ ಅಂಗಳ ಮತ್ತು ದಕ್ಷಿಣದ ಮುಂಭಾಗದ ಉದ್ದಕ್ಕೂ ಹುಲ್ಲಿನ ಪದರಗಳು ತಂಪಾದ ವಾತಾವರಣ ಕಲ್ಪಿಸುವುದಕ್ಕೆ ಕೈಜೋಡಿಸುತ್ತವೆ. ಆದ್ದರಿಂದ ಒಳಾಂಗಣದ ಯಾವುದೇ ಭಾಗವು ಎಂದಿಗೂ ಪಾದರಸ ಹೆಚ್ಚಳವಾಗುವುದಕ್ಕೆ ಅನುಮತಿಸುವುದಿಲ್ಲ.

8 / 10
ಸ್ಥಳೀಯ ಜನರಿಗೆ ಈ ವಾಸ್ತುಶಿಲ್ಪವು ಒಮ್ಮೆಗೆ ಪರಿಚಿತ ಮತ್ತು ಅಪರಿಚಿತವೂ ಆಗಿ ಕಂಗೊಳಿಸುತ್ತಿದೆ. ಏಕೆಂದರೆ ಇದು ಸ್ಥಳೀಯವಾಗಿ ಅಂಗಳದ ಮನೆಯಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಇದು ತನ್ನ ಗ್ರಾಮೀಣ ವಸತಿಗಿಂತ ಭಿನ್ನವಾಗಿದೆ. ಇಲ್ಲಿರುವ ಕೆಫೆಟೇರಿಯಾ, ಶೌಚಾಲಯಗಳು, ಮಳಿಗೆಗಳು ಮತ್ತು ಪಾರ್ಕಿಂಗ್ ಸ್ಥಳಗಳೊಂದಿಗೆ ಸಂಪೂರ್ಣ ಸೌಕರ್ಯದ ವಿನ್ಯಾಸವಾಗಿದೆ. ಇದರರ್ಥ ನೀವು ಎಷ್ಟು ದೂರದಿಂದ ಬಂದಿದ್ದರು ಅಥವಾ ನೀವು ಎಷ್ಟು ಸಮಯದವರೆಗೆ ಇಲ್ಲಿಯೇ ಇದ್ದರೂ ಸದಾ ಇಲ್ಲಿನವರೇ ಎಂಬ ಭಾವನೆ ನಿಮ್ಮಲ್ಲಿ ಮನೆ ಮಾಡಿರುತ್ತದೆ.

9 / 10
ಮಳೆನೀರು ಕೊಯ್ಲು, ನೀರಿನ ಮರುಬಳಕೆ ಮತ್ತು ಸ್ಥಳೀಯ ವಸ್ತುಗಳ ಬಳಕೆ ಮತ್ತು ಕರಕುಶಲತೆಯನ್ನು ಒಳಗೊಂಡಿರುವ ಸ್ಥಳೀಯವಾಗಿ ಸೂಕ್ಷ್ಮವಾದ ವಿನ್ಯಾಸದ ನೀತಿಯು ಪರಿಸರ ಸ್ನೇಹಿ ಅಂಶವನ್ನು ಬಹುವಾಗಿ ಪ್ರತಿಪಾದಿಸುತ್ತದೆ. ಇದು ಸ್ಥಳೀಯ ಆರ್ಥಿಕತೆಯನ್ನು ಸಹ ಉತ್ತೇಜಿಸುತ್ತದೆ ಎನ್ನುತ್ತಾರೆ ಪುರಿ. ಭಾರತ ಸರ್ಕಾರದ ಪಡೇ ಭಾರತ್ ಬಡೇ ಭಾರತ್ ಕಾರ್ಯಕ್ರಮದಡಿಯಲ್ಲಿ (Padhe Bharat Badhe Bharat programme), ಎಲ್ಲಾ ಸರ್ಕಾರಿ ಶಾಲೆಗಳಿಗೆ ವಾರ್ಷಿಕ ಗ್ರಂಥಾಲಯ ಅನುದಾನವನ್ನು ನೀಡಲಾಗುತ್ತದೆ. ಆದರೆ ಕಲಿಕೆಯ ಸಂಸ್ಕೃತಿಯನ್ನು ನಿಜವಾಗಿಯೂ ಉತ್ತೇಜಿಸಲು ಇಂತಹ ಸಮುದಾಯ ಕೇಂದ್ರಗಳ ಅಗತ್ಯವಿರುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

10 / 10
ಈ ಸುಸಜ್ಜಿತ ನೋಖಾ ವಿಲೇಜ್ ಸಮುದಾಯ ಕೇಂದ್ರವು ಕನಿಷ್ಟ 500 ಪ್ರವಾಸಿಗರನ್ನು ಆಹ್ವಾನಿಸುತ್ತದೆ. ಅವರು ವಿವಿಧ ರೀತಿಯಲ್ಲಿ ಅಧ್ಯಯನ ಮಾಡಲು, ಪ್ರದರ್ಶನ ನೀಡಲು, ಓದಲು ಅಥವಾ ಮೇಲ್ಛಾವಣಿಯ ಉದ್ಯಾನದಿಂದ ವೀಕ್ಷಣೆ ಮಾಡಲು ಈ ಕೇಂದ್ರವನ್ನು ಬಳಸುತ್ತಾರೆ.  ಆರ್ಕಿಟೆಕ್ಟ್ ಸಂಜಯ್ ಪುರಿ ಅಂತಹವರಿಗೆ ಇದು ಈ ಪೀಳಿಗೆಗೆ ಮಾತ್ರವಲ್ಲ, ಮುಂದಿನ ಪೀಳಿಗೆಯವರಿಗೆ ನಗರ-ಗ್ರಾಮೀಣ ವಿಭಜನೆಗೆ ಸೇತುವೆಯಾಗಲು ಒಂದು ಮಹತ್ತರ ಹೆಜ್ಜೆಯಾದೀತು.

Published On - 3:08 pm, Tue, 25 June 24