ಒಲಿಂಪಿಕ್ ಪದಕ ಗೆದ್ದಿರುವ ಸ್ವಪ್ನಿಲ್ ಕುಸಾಲೆ, ಧೋನಿಯ ಅಪ್ಪಟ ಅಭಿಮಾನಿ. ವಿಶೇಷ ಸಂಗತಿಯೆಂದರೆ ಧೋನಿಯಂತೆ ಸ್ವಪ್ನಿಲ್ ಕೂಡ ಟಿಕೆಟ್ ಕಲೆಕ್ಟರ್ ಕೆಲಸದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಧೋನಿ 7 ನೇ ನಂಬರ್ ಜೆರ್ಸಿ ತೊಟ್ಟು ಕಣಕ್ಕಿಳಿದರೆ, ಇತ್ತ ಸ್ವಪ್ನಿಲ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 7 ನೇ ಭಾರತೀಯ ಶೂಟರ್ ಆಗಿದ್ದಾರೆ. ಹಾಗೆಯೇ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ 7 ನೇ ಸ್ಥಾನ ಪಡೆದಿದ್ದರು ಎಂಬುದು ಇಲ್ಲಿ ಗಮನಾರ್ಹ.