Pathu Thala: ತಮಿಳಿನಲ್ಲೂ ಭೇಷ್​ ಎನಿಸಿಕೊಂಡ ಕನ್ನಡಿಗ ಮಧು ಗುರುಸ್ವಾಮಿ; ಹಾಡಿ ಹೊಗಳಿದ ನಟ ಸಿಂಬು

Updated on: Mar 28, 2023 | 7:15 AM

Pathu Thala Movie Actor Madhu Guruswamy: ಕಾಲಿವುಡ್​ನ ‘ಪತ್ತು ತಲಾ’ ಸಿನಿಮಾದಲ್ಲಿ ಮಧು ಗುರುಸ್ವಾಮಿ ಅವರು ಸಿಂಗ ಎಂಬ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಸಿಂಬು ಕೂಡ ಫಿದಾ ಆಗಿದ್ದಾರೆ.

1 / 5
ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ ನಟ ಮಧು ಗುರುಸ್ವಾಮಿ. ‘ಡೆಡ್ಲಿ 2’, ‘ಭಜರಂಗಿ’, ‘ಜೈ ಮಾರುತಿ 800’, ‘ಮಫ್ತಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಅವರು ಈಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ ನಟ ಮಧು ಗುರುಸ್ವಾಮಿ. ‘ಡೆಡ್ಲಿ 2’, ‘ಭಜರಂಗಿ’, ‘ಜೈ ಮಾರುತಿ 800’, ‘ಮಫ್ತಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಅವರು ಈಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

2 / 5

ಕನ್ನಡದ ‘ಮಫ್ತಿ’ ಸಿನಿಮಾ ತಮಿಳಿಗೆ ‘ಪತ್ತು ತಲಾ’ ಎಂದು ರಿಮೇಕ್​ ಆಗಿದೆ. ಈ ಸಿನಿಮಾಗೆ ಸಿಂಬು ಹೀರೋ. ಕನ್ನಡಿಗ ಮಧು ಗುರುಸ್ವಾಮಿ ವಿಲನ್​ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅವರ ನಟನೆಯನ್ನು ಕಂಡು ಸಿಂಬು ಅವರು ಹೊಗಳಿದ್ದಾರೆ.

3 / 5

‘ಪತ್ತು ತಲಾ’ ಚಿತ್ರತಂಡದ ಎಲ್ಲರೂ ಮಧು ಗುರುಸ್ವಾಮಿ ಅವರ ನಟನೆಗೆ ಫಿದಾ ಆಗಿದ್ದಾರೆ. ಈ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಅವರ ಪ್ರತಿಭೆಯನ್ನು ಅನೇಕರು ಕೊಂಡಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಸಿಂಗ ಎಂಬ ಪಾತ್ರ ಮಾಡಿದ್ದಾರೆ.

4 / 5

ಪ್ರತಿ ಸಿನಿಮಾದಲ್ಲೂ ಮಧು ಗುರುಸ್ವಾಮಿ ಅವರು ಡಿಫರೆಂಟ್​ ಪಾತ್ರಗಳಿಗೆ ಬಣ್ಣ ಹಚ್ಚುತ್ತಾರೆ. ಎಂಥ ಪಾತ್ರ ಕೊಟ್ಟರೂ ಸೈ ಎಂಬಂತೆ ನಟಿಸುವ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಪರಭಾಷೆಯಲ್ಲೂ ಅವರು ಡಿಮ್ಯಾಂಡ್​ ಸೃಷ್ಟಿಸಿಕೊಂಡಿದ್ದಾರೆ.

5 / 5

ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್​’ ಸಿನಿಮಾದಲ್ಲಿಯೂ ಮಧು ಗುರುಸ್ವಾಮಿ ಅವರು ಅಭಿನಯಿಸುತ್ತಿದ್ದಾರೆ. ಪ್ರಭಾಸ್​ ಹೀರೋ ಆಗಿರುವ ಈ ಚಿತ್ರದಲ್ಲಿ ಮಧು ಗುರುಸ್ವಾಮಿ ಅವರಿಗೂ ಒಂದು ಪ್ರಮುಖ ಪಾತ್ರವಿದೆ. ಆ ಚಿತ್ರದಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಗಲಿದೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us