- Kannada News Photo gallery Pictures of PM Narendra Modi inaugurates kashi vishwanath corridor in varanasi
PM Modi in Kashi: ಇದು ಧಾರ್ಮಿಕತೆಯ ಕಾಶಿ! ಕಾಶಿ ಬದಲಾಗಿದೆ ನೋಡಿ, ಅದಕ್ಕೆ ಸಾಕ್ಷಿಯಾಗಿದ್ದಾರೆ ಪ್ರಧಾನಿ ಮೋದಿ
ಕಾಶಿ ಅಂದರೆ ಸಾಕು ಅದಕ್ಕೆ ಅದರದೇ ಆದ ಮಹತ್ವ ಇದೆ. ಧಾರ್ಮಿಕವಾಗಿಯಷ್ಟೇ ಅಲ್ಲ, ಅದು ಸರ್ವಮಾನ್ಯವೂ ಆಗಿದೆ. ಆಯಾ ಕ್ಷೇತ್ರಗಳಲ್ಲಿ ವಿಶೇಷ ಕೇಂದ್ರಗಳಿಗೆ ಕಾಶಿ ಎಂಬುದು ರೂಢಿಗತವಾಗಿದೆ. ಕ್ರಿಕೆಟ್ ಕಾಶಿ ಅಂದರೆ ಲಾರ್ಡ್ಸ್ ಅನ್ನುವ ಹಾಗೆ ಅದು. ಇನ್ನು ನಮ್ಮ ವಾರಣಾಸಿಯ ಕಾಶಿಯಂತೂ ಪುರಾಣಗತವಾಗಿ ಅಪಾರ ಮನ್ನಣೆ ಗಳಿಸಿದೆ. ಕಾಶಿ ವಿಶ್ವನಾಥ್ ಕಾರಿಡಾರ್ ಹೆಸರಿನಲ್ಲಿ ಅದಕ್ಕೆ ಈಗ ಮತ್ತಷ್ಟು ರಂಗು, ಮಹತ್ವ ಬಂದಿದೆ. ಆಧುನಿಕತೆಯ ಸ್ಪರ್ಶವೂ ಆಗಿದೆ. ಬನ್ನೀ ಪ್ರಧಾನಿ ಮೋದಿ ಜೊತೆಗೆ ನಾವೂ ಚಿತ್ರಗಳಲ್ಲಿ ಕಾಶಿ ಕಾರಿಡಾರ್ ಪ್ರದಕ್ಷಿಣೆ ಹಾಕಿ ಬರೋಣಾ...
Updated on:Dec 13, 2021 | 1:32 PM

Pictores of PM Narendra Modi inaugurates kashi vishwanath corridor in varanasi

Pictores of PM Narendra Modi inaugurates kashi vishwanath corridor in varanasi

ಉತ್ತರ ಪ್ರದೇಶದ ಲಲಿತ್ ಘಾಟ್‌ನಲ್ಲಿ ಪ್ರಧಾನಿ ತೀರ್ಥಸ್ನಾನ

ಪ್ರಧಾನಿ ನರೇಂದ್ರ ಮೋದಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಕಾಲ ಭೈರವ ದೇಗುಲದಲ್ಲಿ ಪೂಜೆ ಸಲ್ಲಿಸಿದ್ರು

ಗಂಗಾನದಿ ಘಾಟ್ನಿಂದ ನೇರವಾಗಿ ದೇವಾಲಯಕ್ಕೆ ಬರಲು ಈ ಹಿಂದೆ ಕಿರಿದಾದ ರಸ್ತೆಯಲ್ಲಿ ಭಕ್ತರು ತೆರಳಬೇಕಿತ್ತು. ಸದ್ಯ ಈಗ ಕಾಶಿ ದೇಗುಲಕ್ಕೆ ವಿಶಾಲವಾದ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ದೇವಾಲಯ ಪ್ರವೇಶಕ್ಕೆ ದೊಡ್ಡ ಬಾಗಿಲು ನಿರ್ಮಿಸಿದ್ದು, ದೇವಾಲಯದ ಒಳಭಾಗ ಕೂಡ ಮರು ನಿರ್ಮಾಣ ಮಾಡಲಾಗಿದೆ.

ಕಾಶಿ ಕಾರಿಡಾರ್ನಲ್ಲಿ ಸ್ವಚ್ಛತೆ, ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ರಸ್ತೆ ನಿರ್ಮಾಣ ಮಾಡಲಾಗಿದ್ದು 2ನೇ ಹಂತದ ಕಾಮಗಾರಿ ಮುಂದಿನ ವರ್ಷ ಪೂರ್ಣ ಪೂರ್ಣಗೊಳ್ಳಲಿದೆ.

ವಾಸ್ತುಶಿಲ್ಪಿ ಭೀಮಲ್ ಪಟೇಲ್ ಅವರಿಂದ ಕಾರಿಡಾರ್ ವಿನ್ಯಾಸ ಮಾಡಲಾಗಿದೆ. ಈ ಕಾರಿಡಾರ್ನಿಂದ ಯಾವುದೇ ಅಡೆತಡೆ ಇಲ್ಲದೆ ವಿಶ್ವನಾಥನ ದರ್ಶನ ಪಡೆಯೋದಕ್ಕೆ ಸಾಧ್ಯವಾಗಲಿದೆ. ಕಾಶಿ ದೇಗುಲ ಹಾಗೂ ಗಂಗಾ ನದಿಯ ನಡುವಿನ ಸಂಚಾರದ ಅವಧಿ ಈ ಕಾರಿಡಾರ್ನಿಂದ ಕಡಿತವಾಲಿದೆ.

,000 ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಫುಡ್ ಕೋರ್ಟ್, ವೈದಿಕ ಸೇರಿದಂತೆ ಆಧ್ಯಾತ್ಮಿಕ ಗ್ರಂಥಾಲಯವನ್ನ ಸ್ಥಾಪಿಸಲಾಗಿದೆ. ಜೊತೆಯಲ್ಲಿ ಮೋಕ್ಷ ಗೃಹ ಹಾಗೂ ಗೋಡೋಲಿಯಾ ಗೇಟ್ ಮತ್ತು ಭೋಗಶಾಲಾ ಕೂಡ ತಲೆ ಎತ್ತಿವೆ. ಕಾರಿಡಾರ್ ಉದ್ದಕ್ಕೂ ಭಕ್ತರಿಗಾಗಿ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದುವರೆಗೂ ಏರ್ ಆಂಬುಲೆನ್ಸ್ ಕೇಳಿದ್ದಿವಿ. ಇದೀಗ ವಾಟರ್ ಆಂಬುಲೆನ್ಸ್ ಸಹ ಬಂದಿದೆ ನೋಡಿ! ಕಾಶಿ ಕಾರಿಡಾರ್ನಲ್ಲಿ ವಾಟರ್ ಆಂಬುಲೆನ್ಸ್!
Published On - 1:00 pm, Mon, 13 December 21




