Pro Kabaddi: ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ದುಬಾರಿ ಬೆಲೆಗೆ ಮಾರಾಟವಾದ ಸ್ಟಾರ್ ಆಟಗಾರರಿವರು
Pro Kabaddi: ಸ್ಟಾರ್ ಕಬಡ್ಡಿ ಆಟಗಾರ ಪವನ್ ಕುಮಾರ್ ಸೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ದಾಖಲೆಯ 2.26 ಕೋಟಿ ರೂ. ನೀಡಿ ಖರೀದಿಸಿತು.
Updated on: Aug 13, 2022 | 6:18 PM

ಪ್ರೊ ಕಬಡ್ಡಿ ಲೀಗ್ (PKL) ತನ್ನ ಒಂಬತ್ತನೇ ಸೀಸನ್ ಆರಂಭಿಸಲು ಎಲ್ಲಾ ರೀತಿಯ ತಯಾರಿ ನಡೆಸಿದೆ. ಹೊಸ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ.

ಈ ಬಾರಿಯ ಹರಾಜಿನಲ್ಲಿ ಪ್ರೊ ಕಬಡ್ಡಿ ಲೀಗ್ ಮತ್ತೊಂದು ಹಂತ ತಲುಪಿದ್ದು, ಹರಾಜಿನಲ್ಲಿ ಆಟಗಾರರ ಬಿಡ್ 2 ಕೋಟಿ ರೂಪಾಯಿಗೂ ಹೆಚ್ಚು ತಲುಪಿದೆ. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಈ ರೀತಿಯ ಪೈಪೋಟಿ ಹಿಂದೆಂದೂ ಕಂಡಿರಲಿಲ್ಲ.

ಸ್ಟಾರ್ ಕಬಡ್ಡಿ ಆಟಗಾರ ಪವನ್ ಕುಮಾರ್ ಸೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ದಾಖಲೆಯ 2.26 ಕೋಟಿ ರೂ. ನೀಡಿ ಖರೀದಿಸಿತು. ಹೀಗಾಗಿ ಪವನ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾದರು.

ಆ ರಾತ್ರಿ ಮಿಲಿಯನೇರ್ ಆದ ಇತರ ಮೂವರು ಕಬಡ್ಡಿ ಆಟಗಾರರು ವಿಕಾಸ್ ಖಂಡೋಲಾ, ಇರಾನ್‌ನ ಫಜಲ್ ಅಲ್ರಾಚಲಿ ಮತ್ತು ಗುಮಾನ್ ಸಿಂಗ್. ಬಿಕಾಶ್ ಬೆಂಗಳೂರು ಬುಲ್ಸ್‌ಗೆ 1.7 ಕೋಟಿ ರೂ. ಬಿಕರಿಯಾದರೆ, 1.38 ಕೋಟಿಗೆ ಫಜಲ್ ಪುಣೇರಿ ಪಲ್ಟಾನ್ ಪಾಲಾದರು. ಹಾಗೆಯೇ 1.38 ಕೋಟಿಗೆ ಗುಮನ್ ಸಿಂಗ್ ಯು ಮುಂಬಾ ತಂಡ ಸೇರಿಕೊಂಡರು.

2014ರಲ್ಲಿ ಆರಂಭವಾದ ಪ್ರೊ ಕಬಡ್ಡಿ ಲೀಗ್ ಬಹುದೂರ ಸಾಗಿ ಒಂಬತ್ತನೇ ಸೀಸನ್ ತಲುಪಿದೆ. PKL ಈಗ ಜನಪ್ರಿಯತೆ, ಪ್ರೇಕ್ಷಕರು ಮತ್ತು ಹಣಕಾಸಿನ ವಿಷಯದಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡಿದೆ.
