- Kannada News Photo gallery PM Modi Mysuru Road Show Narendra Modi roadshow from Vidyapeetha Circle to Highway Circle in Mysuru
Modi Mysuru Road Show: ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಅಲೆ ಎಬ್ಬಿಸಿದ್ದಾರೆ. ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಯಿತು. ಇದರ ಫೋಟೋಗಳು ಇಲ್ಲಿವೆ.
Updated on: Apr 30, 2023 | 7:53 PM

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಅಲೆ ಎಬ್ಬಿಸಿದ್ದಾರೆ.

ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಯಿತು.

ಮಾತ್ರವಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದುಕೊಂಡು, ಕೇಸರಿ ಶಾಲು ಧರಿಸಿಕೊಂಡು ದಾರಿಯುದ್ದಕ್ಕೂ ನಡೆದರು.

ರೋಡ್ ಶೋ ವೇಳೆ ಮೋದಿ.. ಮೋದಿ.. ಮೋದಿ.., ಪ್ರಧಾನಿ ಮೋದಿಗೆ ಜಯವಾಗಲಿ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂಬಿತ್ಯಾದಿ ಜಯಘೋಷಗಳು ಮೊಳಗಿದವು.

ಪ್ರಧಾನಿ ಮೋದಿ ಜೊತೆ ತೆರೆದ ವಾಹನದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎ.ರಾಮದಾಸ್ ಅವರು ಇದ್ದರು.

ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್ ನಡುವೆ ದಾರಿಯುದ್ದಕ್ಕೂ ಜಮಾಯಿಸಿದ್ದ ಸಾವಿರಾರರು ಕಾರ್ಯಕರ್ತರು, ಅಭಿಮಾನಿಗಳತ್ತ ಪ್ರಧಾನಿ ಮೋದಿ ಅವರು ಕೈ ಬೀಸಿದರು.

ಮೋದಿ ರೋಡ್ ಶೋ ವೇಳೆ ತೆರೆದ ವಾಹನದ ಮುಂದೆ ವಿವಿಧ ನೃತ್ಯ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ಸೇರಿದಂತೆ ಮೈಸೂರಿನ ಸಂಸ್ಕೃತಿ ಮೋದಿ ಮುಂದೆ ಪ್ರದರ್ಶನ ಮಾಡಲಾಯಿತು.

ಬನ್ನಿಮಂಟಪದ LIC ವೃತ್ತದಲ್ಲಿ ಅಂತ್ಯವಾಗಬೇಕಿದ್ದ ಮೋದಿ ರೋಡ್ ಶೋ ಸಮಯದ ಅಭಾವದ ಹಿನ್ನೆಲೆ ಹೈವೇ ಸರ್ಕಲ್ವರೆಗೆ ರೋಡ್ ಶೋ ನಡೆಸಲಾಯಿತು.

ವಿಶ್ವ ಮೆಚ್ಚಿದ ನಾಯಕ ಮೋದಿ ತಮ್ಮ ಬಳಿಗೆ ತಲುಪುತ್ತಿದ್ದಂತೆ ಕಾರ್ಯಕರ್ತರು ಅಭಿಮಾನಿಗಳು ಹೂವಿನ ಮಳೆಗರೆದರು.

ರೋಡ್ ಶೋ ವೇಳೆ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್ಎ ರಾಮದಾಸ್ ಅವರೊಂದಿಗೆ ಪ್ರಧಾನಿ ಮೋದಿ ಮಾತನಾಡುತ್ತಿರುವುದು. ಪ್ರಸಕ್ತ ಚುನಾವಣೆಯಲ್ಲಿ ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.









