Updated on: May 07, 2023 | 10:20 PM
ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ.7) ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಪ್ರತಿಮೆ ಬಳಿಯಿಂದ ರೋಡ್ಶೋ ಆರಂಭಿಸಿದರು.
ಬೆಂಗಳೂರಿನಲ್ಲಿ ರೋಡ್ ಶೋ ವೇಳೆ ದಾರಿಯುದ್ದಕ್ಕೂ ಭಾರೀ ಸಂಖ್ಯೆಲ್ಲಿ ಜನರು, ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರು.
ರೋಡ್ ಶೋ ಉದ್ದಕ್ಕೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ತಮ್ಮ ನೆಚ್ಚಿನ ನಾಯಕ ಮೋದಿಗೆ ಹೂವಿನ ಮಳೆಗೈದರು. ಇತ್ತ ಮೋದಿ ಕೂಡ ಜನರ ಪ್ರೀತಿಗೆ ಮೆಚ್ಚಿ ಅವರ ಮೇಲೂ ಹೂವನ್ನು ಹಾಕಿದರು.
ಜಗ ಮೆಚ್ಚಿದ ಮೋದಿಯನ್ನು ಕಂಡ ಜನರಿಂದ ಮೋದಿ.. ಮೋದಿ.. ಮೋದಿ.. ಎಂಬ ಜಯಘೋಷಗಳು ಮೊಳಗಿದವು.
ರಾಜ್ಯದಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಹೇಳಿದ ನಂತರ ಈ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಮುಸ್ಲಿಂ ಮಹಿಳೆಯೊಬ್ಬಳು ಮೋದಿ ರೋಡ್ ಶೋ ವೇಳೆ ಜೈ ಬಜರಂಗಿ, ಜೈ ಬಿಜೆಪಿ ಎಂದು ಬರೆದಿರುವ ಭಿತ್ತಿಪತ್ರವನ್ನು ಹಿಡಿದು ಗಮನಸೆಳೆದರು.
ವಿಶ್ವ ನಾಯಕ ಮೋದಿಯನ್ನು ನೋಡಲು ಬಾಲಕಿಯೊಬ್ಬಳು ತನ್ನ ತಂದೆಯ ಹೆಗಲಮೇಲೆರಿ ಕುಳಿತ ದೃಶ್ಯ.
ಮೋದಿಯವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು.
ಅಭಿಮಾನಿಯೊಬ್ಬರು ತನ್ನ ನೆಚ್ಚಿನ ನಾಯಕನನ್ನು ನೋಡಲೆಂದು ವೀಲ್ ಚೇರ್ನಲ್ಲಿ ಕುಳಿತುಕೊಂಡಿರುವುದು.
ನಾಡ ಪ್ರಭು ಕೆಂಪೇಗೌಡ ಪ್ರತಿಮೆಗೆ ಪ್ರಧಾನಿ ಮೋದಿ ನಮಸ್ಕರಿಸಿದರು.