- Kannada News Photo gallery PM Modi Visits Bandipur Tiger Reserve, Goes On 20 Km Jeep Safari here Is Stunning Pics
Private: ದುರ್ಬಿನ್ನಿಂದ ಹುಲಿ ಹುಡುಕಿದ ಮೋದಿ, ಸಫಾರಿ ವೇಳೆ ಪ್ರಧಾನಿಗೆ ಕಂಡ ಪ್ರಾಣಿಗಳಾವುವು? ಇಲ್ಲಿವೆ ಫೋಟೋಸ್
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಒಂದೂವರೆ ತಾಸು ಸಫಾರಿ ನಡೆಸಿದ್ದು ಸುಮಾರು 20 ಕಿ.ಮೀ ಕಾಡಿನಲ್ಲಿ ಓಡಾಡಿದ್ದಾರೆ. ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಎಂಟ್ರಿ ಕೊಟ್ಟ ಮೋದಿ ಸ್ಟೈಲ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಫಿದಾ ಆಗಿದ್ದಾರೆ. ಬಂಡೀಪುರಕ್ಕೆ ಬರುವ ಮುನ್ನ ಕೈಯಲ್ಲಿ ಜಾಕೆಟ್ ಹಿಡಿದು ಬರುವುದು ಹಾಗೂ ಬೋಳಗುಡ್ಡದಲ್ಲಿ ಬೈನಾಕುಲರ್ ನಲ್ಲಿ ಕಾಡಿನ ವೀಕ್ಷಣೆ, ಹುಲಿ ಚಿತ್ರದ ಜೊತೆ ಫೋಟೋಗೆ ಪೋಸ್ನ ಸ್ಟೈಲಿಶ್ ಚಿತ್ರಗಳು ವೈರಲ್ ಆಗಿವೆ.
Updated on:Apr 10, 2023 | 7:54 AM

ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಭೇಟಿ ನೀಡಿದರು.

ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿದ ಮೋದಿ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯದಲ್ಲಿ ಸಫಾರಿ ಮಾಡಿದರು.

ವಾಹನವನ್ನು ಬಂಡೀಪುರ ಅರಣ್ಯ ಇಲಾಖೆಯ ಚಾಲಕ ಮಧುಸೂದನ್ ಜೀಪ್ನಲ್ಲಿ ಮೋದಿಯವರನ್ನು ಕೂಡಿಸಿಕೊಂಡು ಕಾಡು ಸುತ್ತಾಡಿಸಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಒಂದೂವರೆ ತಾಸು ಸಫಾರಿ ನಡೆಸಿದ್ದು ಸುಮಾರು 20 ಕಿ.ಮೀ ಕಾಡಿನಲ್ಲಿ ಓಡಾಡಿದ್ದಾರೆ.

ಸಫಾರಿಯನ್ನು ಓಪನ್ ಜೀಪ್ನಲ್ಲಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ದುರ್ಬಿನ್ ಹಿಡಿದು ಪ್ರಾಣಿಗಳನ್ನು ವೀಕ್ಷಿಸಿದರು

ದುರ್ಬಿನ್ ಹಿಡಿದು ಕಾಡು ವೀಕ್ಷಿಸಿದ ಮೋದಿ, ಕ್ಯಾಮೆರಾ ಹಿಡಿದು ಕೆಲ ಪ್ರಾಣಿಗಳ ಫೋಟೋ ಕ್ಲಿಕ್ಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಫಾರಿ ಅವರು ವೇಳೆ ಜಿಂಕೆಗಳನ್ನು ಕಂಡಿದ್ದಾರೆ.

ಹಾಗೇ ಕಡವೆ, ಕಾಡೆಮ್ಮೆ, ಉಡಗಳನ್ನು ನೋಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಫಾರಿ ವೇಳೆ ಎದುರಿಗೆ ಬಂದ ಆನೆಗೆ ಕಬ್ಬು ನೀಡಿದ್ದಾರೆ.

ನರೇಂದ್ರ ಮೋದಿ 20ಕಿ.ಮೀ ಸಫಾರಿ ಮಾಡಿದರೂ ಸಹ ಒಂದೇ ಒಂದು ಹುಲಿ ಕಂಡಿಲ್ಲ ಎಂದು ತಿಳಿದುಬಂದಿದೆ
Published On - 12:55 pm, Sun, 9 April 23



















