ಅಧಿಕ ಇಳುವರಿ ನೀಡುವ 109 ಬೆಳೆಗಳ ತಳಿ ಬಿಡುಗಡೆ ಮಾಡಿದ ಮೋದಿ

ಪ್ರಧಾನಿ ಮೋದಿ ಇಂದು 109 ಅಧಿಕ ಇಳುವರಿ ನೀಡುವ, ಹವಾಮಾನ-ನಿರೋಧಕ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಿದರು. ಪ್ರಧಾನಿ ಮೋದಿ ಅವರು ದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿ ಮೂರು ಪ್ರಾಯೋಗಿಕ ಕೃಷಿ ಪ್ಲಾಟ್‌ಗಳಲ್ಲಿ ಈ ಬೀಜಗಳನ್ನು ಅನಾವರಣಗೊಳಿಸಿದರು. ಅಲ್ಲಿ ಅವರು ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು.

ಸುಷ್ಮಾ ಚಕ್ರೆ
|

Updated on:Aug 11, 2024 | 6:03 PM

ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 109 ಅಧಿಕ ಇಳುವರಿ ನೀಡುವ, ಹವಾಮಾನ-ನಿರೋಧಕ ಮತ್ತು ಜೈವಿಕ ಬಲವರ್ಧಿತ ಬೆಳೆಗಳನ್ನು ಇಂದು ಬಿಡುಗಡೆ ಮಾಡಿದರು.

1 / 8
ನೂತನ ಬೆಳೆಯ ತಳಿಗಳನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಸಿರಿಧಾನ್ಯಗಳ ಪ್ರಾಮುಖ್ಯತೆ, ನೈಸರ್ಗಿಕ ಕೃಷಿಯ ಪ್ರಯೋಜನಗಳು ಮತ್ತು ಸಾವಯವ ಕೃಷಿಯತ್ತ ಸಾಮಾನ್ಯ ಜನರ ಹೆಚ್ಚುತ್ತಿರುವ ನಂಬಿಕೆಯ ಕುರಿತು ಚರ್ಚಿಸಿದರು.

2 / 8
ಪ್ರಧಾನಿ ಮೋದಿ ಬಿಡುಗಡೆ ಮಾಡಿದ 61 ಬೆಳೆಗಳ 109 ವಿಧಗಳಲ್ಲಿ 34 ಕ್ಷೇತ್ರ ಬೆಳೆಗಳು ಮತ್ತು 27 ತೋಟಗಾರಿಕಾ ಬೆಳೆಗಳು ಸೇರಿವೆ.

3 / 8
ಕ್ಷೇತ್ರ ಬೆಳೆಗಳಲ್ಲಿ ರಾಗಿ, ಮೇವು ಬೆಳೆಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ, ನಾರು ಮತ್ತು ಇತರ ಸಂಭಾವ್ಯ ಬೆಳೆಗಳು ಸೇರಿದಂತೆ ವಿವಿಧ ಧಾನ್ಯಗಳ ಬೀಜಗಳನ್ನು ಬಿಡುಗಡೆ ಮಾಡಲಾಯಿತು.

4 / 8
ತೋಟಗಾರಿಕಾ ಬೆಳೆಗಳ ಪೈಕಿ ವಿವಿಧ ಬಗೆಯ ಹಣ್ಣುಗಳು, ತರಕಾರಿ ಬೆಳೆಗಳು, ತೋಟದ ಬೆಳೆಗಳು, ಗಡ್ಡೆ ಬೆಳೆಗಳು, ಸಾಂಬಾರು ಪದಾರ್ಥಗಳು, ಹೂವುಗಳು ಮತ್ತು ಔಷಧೀಯ ಬೆಳೆಗಳನ್ನು ಬಿಡುಗಡೆ ಮಾಡಲಾಯಿತು.

5 / 8
ಈ ವೇಳೆ ಅವರು ರೈತರು ಮತ್ತು ವಿಜ್ಞಾನಿಗಳ ಜೊತೆ ಸಂವಾದ ನಡೆಸಿದರು. ಸಂವಾದದ ವೇಳೆ ಕೃಷಿ ಕ್ಷೇತ್ರವನ್ನು ಮೌಲ್ಯವರ್ಧಿತಗೊಳಿಸುವ ವಿಧಾನದ ಬಗ್ಗೆ ಅವರು ಚರ್ಚಿಸಿದರು.

6 / 8
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಅಭಿವೃದ್ಧಿಪಡಿಸಿದ ಈ ಪ್ರಭೇದಗಳು 34 ಕ್ಷೇತ್ರ ಬೆಳೆಗಳು ಮತ್ತು 27 ತೋಟಗಾರಿಕಾ ಬೆಳೆಗಳು ಸೇರಿದಂತೆ 61 ಬೆಳೆಗಳನ್ನು ಒಳಗೊಂಡಿವೆ.

7 / 8
ಭಾರತದಲ್ಲಿನ ಅಪೌಷ್ಟಿಕತೆಯನ್ನು ಎದುರಿಸಲು ಮಧ್ಯಾಹ್ನದ ಊಟ ಯೋಜನೆ ಮತ್ತು ಅಂಗನವಾಡಿ ಸೇವೆಗಳಂತಹ ಸರ್ಕಾರಿ ಉಪಕ್ರಮಗಳಿಗೆ ಅವುಗಳನ್ನು ಲಿಂಕ್ ಮಾಡುವ ಮೂಲಕ ಜೈವಿಕ ಬಲವರ್ಧಿತ ಬೆಳೆ ಪ್ರಭೇದಗಳ ಪ್ರಚಾರಕ್ಕೂ ಮೋದಿ ಒತ್ತು ನೀಡಿದರು.

8 / 8

Published On - 4:22 pm, Sun, 11 August 24

Follow us